Connect with us

    FILM

    ಬಿಕಿನಿ ಫೋಟೋ ಕೇಳಿದ ಅಭಿಮಾನಿಯ ಅಡ್ರೆಸ್ ಕೇಳಿದ ನಟಿ….!!

    ಕೇರಳ : ಮಲೆಯಾಳಂ ನ ಪ್ರೇಮಂ ನಿಂದ ಜನಪ್ರಿಯರಾಗಿರುವ ನಟಿ ಅನುಪಮಾ ಪರಮೇಶ್ವರನ್ ಪುನೀತ್ ರಾಜ್ ಕುಮಾರ್ ಅವರ ನಟ ಸಾರ್ವಭೌಮ ಚಿತ್ರದ ಮೂಲಕ ಕನ್ನಡದಲ್ಲೂ ನಟನೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಅನುಪಮ ಇತ್ತೀಚೆಗೆ ಅಭಿಯಾನಿಯೊಬ್ಬ ಕೇಳಿ ಪ್ರಶ್ನೆಗೆ ಸರಿಯಾದ ತಿರುಗೇಟು ನೀಡಿದ್ದಾರೆ.


    ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವ ಅನುಪಮಾ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ನೆಟಿಜನ್‌ಗಳ ಜೊತೆ ನೇರ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಅನುಪಮಾ ಉತ್ತರಿಸಿದ್ದಾರೆ.

    ಈ ಸಂದರ್ಭದಲ್ಲಿ, ನೆಟಿಜನ್ ಬಿಕಿನಿಯನ್ನು ಧರಿಸಿರುವ ಫೋಟೋವನ್ನು ಹಂಚಿಕೊಳ್ಳಲು ಅನುಪಮಾ ಅವರನ್ನು ಕೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ಅನುಪಮಾ.. ‘ನಿಮ್ಮ ವಿಳಾಸ ಕಳುಹಿಸಿ .. ನಾನು ಫೋಟೋ ಕಳುಹಿಸುತ್ತೇನೆ. ಅದಕ್ಕೆ ಪ್ರೇಮ್ ಹಾಕಿ ಮನೆಯಲ್ಲಿ ಇಡು ಎಂದು ಕೌಂಟರ್ ಕೊಟ್ಟಿದ್ದಾರೆ.


    ಪ್ರಶ್ನೆಗೆ ಸಿಟ್ಟಾಗದೇ ತಾಳ್ಮೆಯಿಂದಲೇ ಉತ್ತರಿಸುವ ಮೂಲಕ ತಿರುಗೇಟು ನೀಡಿದ್ದು, ನೆಟ್ಟಿಗರ ಪ್ರಶಂಸೆಗೆ ಗುರಿಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply