KARNATAKA
“ಬಾಲ ಬಿಚ್ಚಿದ್ರೆ ಪ್ರಾಪರ್ಟಿ ಸೀಜ್ ಮಾಡುವುದೇ”; ರೌಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಅನುಪಮ್ ಅಗ್ರವಾಲ್..!
ಬಾಲ ಬಿಚ್ಚಿದ್ರೆ ಯಾವುದೇ ಮುಲಾಜಿಲ್ಲದೆ ನಿಮ್ಮ ಪ್ರಾಪರ್ಟಿ ಸೀಝ್ ಮಾಡುವುದೇ ಎಂದು ಕಮೀಷನರ್ ಅನುಪಮ್ ಅಗರ್ವಾಲ್ ಎಚ್ಚರಿಸಿದರು .
ಮಂಗಳೂರು : ಮಂಗಳೂರು ನಗರ ಪೊಲೀಸ್ ಕಮೀಷನೇಟರ್ ವ್ಯಾಪ್ತಿ ರೌಡಿಗಳ ಪರೇಡ್ ಪರೇಡ್ ಗುರುವಾರ ಪೋಲಿಸ್ ಮೈದಾನಿನಲ್ಲಿ ಆಯೋಜಿಸಲಾಗಿತ್ತು.
ಸಾಲು ಸಾಲು ಹಬ್ಬ ಹರಿದಿನಗಳು, ಮತ್ತು ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ನಗರ ಪೊಲೀಸ್ ಕಮೀಷನೇಟರ್ ವ್ಯಾಪ್ತಿಯ 14 ಪೊಲೀಸ್ ಠಾಣೆಗಳ ಪಟ್ಟಿಯಲ್ಲಿರುವ ರೌಡಿಗಳನ್ನು ಕರೆಸಿ ಖಡಕ್ ವಾರ್ನಿಂಗ್ ಕೊಟ್ಟರು,
ಬಾಲ ಬಿಚ್ಚಿದ್ರೆ ಯಾವುದೇ ಮುಲಾಜಿಲ್ಲದೆ ನಿಮ್ಮ ಪ್ರಾಪರ್ಟಿ ಸೀಝ್ ಮಾಡುವುದೇ ಎಂದು ಕಮೀಷನರ್ ಅನುಪಮ್ ಅಗರ್ವಾಲ್ ಎಚ್ಚರಿಸಿದರು .
ಪರೇಡ್ ನಲ್ಲಿ ಒಟ್ಟು 250 ರೌಡಿಗಳು ಭಾಗಿಯಾಗಿದ್ದರೆ, ಹಲವರು ಗೈರು ಹಾಜರಾಗಿದ್ದರು. ಮುಂದಿನ ಬಾರಿ ಎಲ್ಲಾ ರೌಡಿಗಳು ಪರೇಡ್ ಗೆ ಹಾಜರಾಗುವಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರೇಡ್ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೊಲಿಸ್ ಆಯುಕ್ತರು ಒಟ್ಟು 250 ರೌಡಿಗಳು ಪರೇಡ್ ನಲ್ಲಿ ಭಾಗವಹಿಸಿದ್ದಾರೆ.
ಇವರಲ್ಲಿ ಹೆಚ್ಚಿನವರು ಕೊಲೆ,ಕೋಮುಗಲಭೆ,ನೈತಿಕ ಪೊಲೀಸ್ ಗಿರಿಯಲ್ಲಿ ಪಾಲ್ಗೊಂಡವರಾಗಿದ್ದು ಎಲ್ಲಾ ರೌಡಿ ಗಳನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಿದ್ದೇವೆ.
ಅವಶ್ಯಬಿದ್ದರೆ ಮುಂದೆಯೂ ವಿಚಾರಣೆಯನ್ನು ಮಾಡುತ್ತೇವೆ. ಮುಂದೆ ಹಬ್ಬ,ಚುನಾವಣೆ ಬರುವ ಸಂದರ್ಭ ಇರುವುದರಿಂದ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.
ಹಲವರನ್ನು ಈಗಾಗಲೇ ರೌಡಿಗಳನ್ನು ಗಡಿಪಾರು ಮಾಡಲಾಗಿದ್ದು ಇಲ್ಲಿ ಪರೇಡ್‌ನಲ್ಲಿ ಭಾಗವಹಿಸಿದ್ದ ಹತ್ತು ರೌಡಿ ಗಳನ್ನು ಗಡಿಪಾರು ಮಾಡಲು ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.