LATEST NEWS
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಆ್ಯಂಟಿಜೆನ್ ಟೆಸ್ಟ್ ಆರಂಭ
ಮಂಗಳೂರು ಜುಲೈ 15:ಈಗಾಗಲೇ ಅತ್ಯಧಿಕ ಕೊರೊನಾ ಪ್ರಕರಣಗಳಿಂದ ಕಂಗೆಟ್ಟಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೊಂಕನ್ನು ಶೀಘ್ರ ಪತ್ತೆ ಹಚ್ಚುವ ಆ್ಯಂಟಿಜೆನ್ ಟೆಸ್ಟ್ ನ್ನು ಇಂದಿನಿಂದ ಆರಂಭಿಸಲಾಗಿದೆ. ಈ ಆ್ಯಂಟಿಜೆನ್ ಟೆಸ್ಟ್ ನಿಂದ 15 ರಿಂದ 20 ನಿಮಿಷದಲ್ಲಿ ಕೋವಿಡ್ ಪಾಸಿಟಿವ್ ಪತ್ತೆ ಹಚ್ಚಲಾಗುತ್ತದೆ.
ಈ ಹಿಂದೆ ಕೋವಿಡ್ ಪತ್ತೆಗೆ ಎರಡು ದಿನಗಳ ಕಾಲ ಕಾಯಬೇಕಿತ್ತು. ದಕ್ಷಿಣ ಕನ್ನಡ ಜಿಲ್ಲೆಗೆ ಇಂತಹ 3500 ಕಿಟ್ ಬಂದಿದ್ದು ಈ ಕಿಟ್ ಗಳನ್ನು ತುರ್ತು ಸಂದರ್ಭದಲ್ಲಿ ಉಪಯೋಗಿಸಲಾಗುತ್ತದೆ. ಈ ಕಿಟ್ ನಲ್ಲಿ ಇರುವ ಸ್ಟ್ರಿಪ್ ನಲ್ಲಿ ಗಂಟಲು ದ್ರವದ ಮಾದರಿಯ ಹನಿಯನ್ನು ಹಾಕಿದರೆ 15 ನಿಮಿಷದಲ್ಲಿ ಫಲಿತಾಂಶ ಸಿಗುತ್ತದೆ. ಸ್ಟಿಪ್ ನಲ್ಲಿ ಕೆಂಪು ಬಣ್ಣದ ಗೆರೆ ಬಂದರೆ ಪಾಸಿಟಿವ್ ಎಂದು ಗೆರೆ ಬಾರದಿದ್ದರೆ ನೆಗೆಟಿವ್ ಎಂದು ಫಲಿತಾಂಶ ಬರಲಿದೆ. ಸದ್ಯ ಕ್ಕೆ ವಿದೇಶದಿಂದ ಬಂದವರು, ಸರ್ಜರಿ ಮಾಡುವವರು ಮತ್ತು ಸಾವನ್ನಪ್ಪಿದ ವರ ಕೋವಿಡ್ ಟೆಸ್ಟ್ ಗೆ ಬಳಸಲಾಗುತ್ತದೆ.