MANGALORE
ಅಂತರಾಷ್ಟ್ಟೀಯ ದರ್ಜೆಯ ಆಸ್ಪತ್ರೆಗಳಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೇರಳ ರಾಜ್ಯವನ್ನು ಮೀರಿಸಿದ ಕೊರೊನಾ ಸಾವಿನ ಸಂಖ್ಯೆ
ಮಂಗಳೂರು ಜುಲೈ 15: ಕೊರೊನಾ ಸೊಂಕನ್ನು ನಿಯಂತ್ರಿಸುವಲ್ಲಿ ದಕ್ಷಿಣಕನ್ನಡ ಜಿಲ್ಲಾಡಳಿತ ಸಂಪೂರ್ಣ ವಿಫಲತೆ ಹೊಂದಿದ್ದು, ಅಂತರಾಷ್ಟ್ರೀಯ ದರ್ಜೆ ಆಸ್ಪತ್ರೆಗಳನ್ನು ಹೊಂದಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರತಿದಿನ ಕೊರೊನಾದಿಂದ ಸಾವನಪ್ಪುತ್ತಿರುವುದು ವಿಪರ್ಯಾಸವಾಗಿದೆ. ಕಾಸರಗೋಡು ಗಡಿ ಬಂದ್ ಮಾಡಿ ಕೊರೊನಾ ತಡೆಯಲು ಪ್ರಯತ್ನಿಸಿದ ದಕ್ಷಿಣಕನ್ನಡ ಜಿಲ್ಲಾಡಳಿತ ಈಗ ಸಾವಿನ ಸರಾಸರಿಯಲ್ಲಿ ಇಡೀ ಕೇರಳ ರಾಜ್ಯವನ್ನು ಮೀರಿಸಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಮೃತರ ಸಂಖ್ಯೆ 53ಕ್ಕೇರಿದೆ. ಒಟ್ಟು ಸೋಂಕಿತರ ಸಂಖ್ಯೆಗೆ ಹೋಲಿಸಿದರೆ ಮಂಗಳೂರಿನಲ್ಲಿ ಕೊರೊನಾ ಮೃತರ ಅಂಕಿ ಅಂಶ ವಿಪರೀತ ಆಗಿರುವುದು ಕಂಡುಬಂದಿದೆ.
1700ರಷ್ಟು ಪಾಸಿಟಿವ್ ಆಗಿರುವ ಉಡುಪಿ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟಿದ್ದು ಕೇವಲ ಮೂರು ಮಂದಿ. ಆದರೆ, 2450 ಪಾಸಿಟಿವ್ ಆಗಿರುವ ಮಂಗಳೂರಿನಲ್ಲಿ ಕೊರೊನಾ ಮೃತರ ಸಂಖ್ಯೆ ಅರ್ಧ ಶತಕ ದಾಟಿದೆ. ನಿನ್ನೆ ಮತ್ತೆ ಮೂವರ ಸಾವಿನೊಂದಿಗೆ ಸೋಂಕು ದೃಢಪಟ್ಟ ಬಳಿಕ ಮೃತರಾದವರ ಸಂಖ್ಯೆ 53 ಕ್ಕೆ ಏರಿಕೆಯಾಗಿದೆ. ಇಡೀ ಕೇರಳ ರಾಜ್ಯದಲ್ಲಿ 9000 ದಷ್ಟು ಸೋಂಕಿತರ ಪೈಕಿ ಸಾವು ಕಂಡಿದ್ದು ಕೇವಲ 34 ಮಂದಿ. ಮಂಗಳೂರಿನ ಡೆತ್ ರೇಟಿಂಗ್ ಕೇರಳ ರಾಜ್ಯವನ್ನು ಹಿಂದಿಕ್ಕಿದ್ದು ಈಗ ಕರಾವಳಿಯಲ್ಲಿ ಆತಂಕ ಮೂಡಿಸಿದೆ.
ಅತಿ ಹೆಚ್ಚು ಮೆಡಿಕಲ್ ಕಾಲೇಜು, ಆಸ್ಪತ್ರೆಗಳಿರುವ ಮಂಗಳೂರಿನಲ್ಲಿ ದಿನವೂ ಈ ಪರಿ ಕೊರೊನಾ ಸೋಂಕಿತರು ಸಾವನ್ನಪ್ಪುತ್ತಿರುವುದು ಜಿಲ್ಲಾಡಳಿತಕ್ಕೂ ಸವಾಲಾಗಿದೆ. ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸಿಎಂ ಯಡಿಯೂರಪ್ಪ ಕೂಡ ಕೊರೊನಾದಿಂದ ಸಾವು ಆಗದಂತೆ ನೋಡಿಕೊಳ್ಳಿ ಅಂತ ಸೂಚನೆ ನೀಡಿದ್ದಾರೆ. ಆದರೆ, ಮಂಗಳೂರಿನಲ್ಲಿ ಮಾತ್ರ ದಿನವೂ ಮೂರು, ನಾಲ್ಕು ಸಾವು ಆಗುತ್ತಲೇ ಇರುವುದು ಎಚ್ಚರಿಕೆ ಗಂಟೆಯಾಗಿದೆ.
ಪ್ರಾರಂಭದ ಲಾಕ್ ಡೌನ್ ಸಂದರ್ಭ ಕಿಟ್ ವಿತರಣೆ ಗೆ ತೊರಿದ ಉತ್ಸಾಹ ವನ್ನು ಈಗ ಕೊರೊನಾ ನಿಯಂತ್ರಿಸುವ ಸಂಬಂಧ ಜಿಲ್ಲೆಯ ಯಾವುದೇ ಶಾಸಕರಾಗಲೀ ಜನಪ್ರತಿನಿಧಿಗಳಾಗಲೀ ತೋರಿಸುತ್ತಿಲ್ಲ. ಕೇವಲ ಉಳ್ಳಾಲ ಶಾಸಕ ಖಾದರ್ ಮಾತ್ರ ತನ್ನ ವಿಧಾನಸಭಾ ಕ್ಷೇತ್ರದಲ್ಲಿ ರಾಂಡಮ್ ಟೆಸ್ಟ್ ಗಳನ್ನು ನಡೆಸುತ್ತಿದ್ದು, ಕೊರೊನಾ ನಿಯಂತ್ರಿಸಲು ಸಕಲ ಪ್ರಯತ್ನ ನಡೆಸುತ್ತಿದ್ದಾರೆ.
ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ಮತ್ತೆ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಿದೆ. ರಾಜ್ಯ ಸರಕಾರದ ಸಂಡೇ ಲಾಕ್ ಡೌನ್ ನಡೆದರೂ ಒಂದೇ ಒಂದು ಕೊರೊನಾ ಪ್ರಕರಣ ಕಡಿಮೆಯಾಗದ ಈ ಸಂದರ್ಭದಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ನಿಂದಾಗಿ ಕೊರೊನಾ ಸೊಂಕು ಹತೋಟಿಗೆ ಬರಲಿದೆಯಾ ಕಾದು ನೋಡಬೇಕಾಗಿದೆ.
Facebook Comments
You may like
ಮಂಗಳೂರು ಮೇಯರ್ ಆಗಿ ಪ್ರೇಮಾನಂದ ಶೆಟ್ಟಿ.. ಸುಮಂಗಲಾ ರಾವ್ ಉಪ ಮೇಯರ್
ಮದುವೆ ಸಂಭ್ರಮ ಮಗಿಯುವ ಮೊದಲೆ ಹೃದಯಾಘಾತಕ್ಕೆ ಬಲಿಯಾದ ನವವಧು
ಕಾಡಾನೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋದಾ ಯುವಕ ಅಪ್ಪಚ್ಚಿ!
ಕೋಟ – ಬೈಕ್ ಗೆ ಕಾರು ಡಿಕ್ಕಿ ಸವಾರ ಸ್ಥಳದಲ್ಲೇ ಸಾವು
ಮತ್ತೆ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಏರಿಕೆ.. ಫೆಬ್ರವರಿಯಲ್ಲಿ ಇದು 16ನೇ ಬಾರಿ
ಮೂತ್ರ ವಿಸರ್ಜನೆಗೆ ಹೋಗಿದ್ದ ಲಾರಿ ಚಾಲಕನ್ನು ತುಳಿದು ಸಾಯಿಸಿದ ಕಾಡಾನೆ
You must be logged in to post a comment Login