Connect with us

LATEST NEWS

ಹಿಝ್ಬುಲ್ಲಾದ ಮತ್ತೊಂದು ವಿಕೆಟ್ ಪತನ, ಹಣಕಾಸು ಮುಖ್ಯಸ್ಥನ ಕಾರನ್ನೇ ಉಡಾಯಿಸಿದ ಇಸ್ರೇಲ್ ಸೇನೆ..!

ಲೆಬನಾನ್: ಹಿಝ್ಬುಲ್ಲಾಗಳ ಮೇಲೆ  ಇಸ್ರೇಲ್ ದಾಳಿ ತೀವ್ರಗೊಂಡಿದ್ದು  ಹಿಝ್ಬುಲ್ಲಾದ (Hezbollah) ಮತ್ತೊಂದು ವಿಕೆಟ್ ಪತನವಾಗಿದೆ. ಹಣಕಾಸು ಮುಖ್ಯಸ್ಥನ ಕಾರನ್ನೇ ಇಸ್ರೇಲ್ ಸೇನೆ  ಉಡಾಯಿಸಿದೆ.  ಇಸ್ರೇಲ್ ಸೇನೆ ಹಿಝ್ಬುಲ್ಲಾ ಸಂಘಟನೆಯ ಹಣಕಾಸು ಮುಖ್ಯಸ್ಥನನ್ನು ಸಿರಿಯಾ ಮೇಲೆ ನಡೆಸಿದ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ಪ್ರಕಟಿಸಿದೆ.

ಈ ಹಿಝ್ಬುಲ್ಲಾ ಕಮಾಂಡರ್ ನ ಹೆಸರನ್ನು ಸೇನೆ ಬಹಿರಂಗಪಡಿಸಿಲ್ಲ. ಆದರೆ ಆತ ಹಿಝ್ಬುಲ್ಲಾ 4400 ಘಟಕದ ಮುಖ್ಯಸ್ಥ ಎಂದು ಸ್ಪಷ್ಟಪಡಿಸಿದೆ. ಈ ಘಟಕ ಟೆಹರಾನ್ ನಿಂದ ಹಿಝ್ಬುಲ್ಲಾಗೆ ಹಣ ವರ್ಗಾವಣೆ ಮಾಡುತ್ತಿತ್ತು ಎಂದು ಹೇಳಿದೆ. ಮುಖ್ಯವಾಗಿ ಇರಾನ್ ಮಾರಾಟ ಮಾಡುವ ತೈಲದಿಂದ ಬರುವ ಹಣವನ್ನು ವರ್ಗಾಯಿಸಲಾಗುತ್ತಿತ್ತು ಎಂದು ಸ್ಪಷ್ಟಪಡಿಸಿದೆ.ಇಸ್ರೇಲಿ ಸೇನೆಯ ವಕ್ತಾರ ರೇರ್ ಅಡ್ಮಿರಲ್ ಡೇನಿಯಲ್ ಹಗರಿ ಈ ವಿಷಯವನ್ನು ಬಹಿರಂಗಪಡಿಸಿದ್ದು, 4400 ಘಟಕ, ಹಿಝ್ಬುಲ್ಲಾ ಸಂಘಟನೆಗೆ ಲಕ್ಷಾಂತರ ಡಾಲರ್ ಹಣಕಾಸಿನ ನೆರವನ್ನು ವರ್ಗಾಯಿಸುತ್ತಿತ್ತು ಎಂದು ವಿವರಿಸಿದ್ದಾರೆ.ಈ ಮಧ್ಯೆ ಅಲ್ ಕ್ವಾರ್ಡ್ ಅಲ್ ಹಸನ್ನಲ್ಲಿ ಹಿಝ್ಬುಲ್ಲಾ ನಿರ್ವಹಿಸುವ ಹಣಕಾಸು ಸಂಸ್ಥೆಗಳ ಮೇಲೆ ಗುರಿ ಮಾಡಿದ ದಾಳಿಯನ್ನು ಮುಂದುವರಿಸುವುದಾಗಿ ಹೇಳಿದೆ. ದಕ್ಷಿಣ ಬೈರೂತ್ ನ ಕನಿಷ್ಠ 15 ಶಾಖೆಗಳ ಮೇಲೆ ದಾಳಿ ನಡೆಸಲಾಗಿದ್ದು, ಬೆಕ್ಕಾ ಕಣಿವೆಯ ಪ್ರದೇಶದಲ್ಲಿ 9 ಮಹಡಿಯ ಕಟ್ಟಡವನ್ನು ಧ್ವಂಸಗೊಳಿಸಿರುವುದಾಗಿ ತಿಳಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *