Connect with us

LATEST NEWS

ಮಂಗಳೂರಿನ ಕೋರ್ಟ್ ರೋಡ್ ನಲ್ಲಿ ತಲೆ ಕಡಿಯುವ ಅರ್ಥದಲ್ಲಿ ಮತ್ತೊಂದು ಗೋಡೆ ಬರಹ

ಮಂಗಳೂರು ನವೆಂಬರ್ 29 : ಮಂಗಳೂರಿನಲ್ಲಿ ಮತ್ತೊಂದು ವಿವಾದಾತ್ಮಕ ಗೋಡೆ ಬರಹ ಕಾಣಿಸಿಕೊಂಡಿದೆ. ಮಂಗಳೂರಿನ ಹೃದಯಭಾಗ ಮಂಗಳೂರಿನ ಕೋರ್ಟ್ ರೋಡ್ ನಲ್ಲಿರುವ ಪೊಲೀಸ್  ಔಟ್ ಪೋಸ್ಟ್ ನ ಗೊಡೆಯಲ್ಲಿ ಈ ವಿವಾದಾತ್ಮಕ  ಬರಹ ಬರೆಯಲಾಗಿದೆ.

ಉರ್ದು ಭಾಷೆಯಲ್ಲಿ ಬರೆದು ಹೋಗಿರೋ ಕಿಡಿಗೇಡಿಗಳು.’Gustuk e Rasool ek hi saza sar tan say juda’ ಎಂದು ಗೋಡೆ ಬರಹ ಬರೆಯಲಾಗಿದ್ದು,  ಪ್ರವಾದಿಗೆ ಕೋಪ ಬಂದರೆ ಒಂದೆ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದುಎಂಬ ಅರ್ಥ ನೀಡುವ ಬರವಣಿಗೆ ಇದಾಗಿದೆ.

ಮಂಗಳೂರಿನ ಕೋರ್ಟ್ ಪ್ರಿಮಿಸಸ್ ನ ಹಳೇ ಪೊಲೀಸ್ ಔಟ್ ಪೋಸ್ಟ್ ನ ಗೋಡೆ‌ ಯಲ್ಲಿ ಈ ಬರಹ ಬರೆಯಲಾಗಿದೆ.

ಸದ್ಯ ಗೋಡೆ ಬರಹವನ್ನು ಪೊಲೀಸರು ಅಳಿಸಿ ಹಾಕಿದ್ದಾರೆ. ಪೊಲೀಸರಿಂದ ಕೋರ್ಟ್ ರಸ್ತೆಯ ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸಿದ್ದು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಬಿಜೈ ಸಮೀಪದ ಅಪಾರ್ಟ್ ಮೆಂಟ್ ಒಂದರ ಕಂಪೌಂಡ್ ಗೊಡೆ ಮೇಲೆ ಉಗ್ರರ ಪರ ಇದೇ ರೀತಿ ಗೊಡೆ ಬರಹ ಬರೆಯಲಾಗಿತ್ತು. ಈಗ ಮತ್ತೆ ದುಷ್ಕರ್ಮಿಗಳು ಕೋರ್ಟ್ ಆವರಣದಲ್ಲಿ  ಎಚ್ಚರಿಕೆ ರೀತಿಯಲ್ಲಿ ಗೊಡೆ ಬರಹ ಬರೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. 

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *