Connect with us

    FILM

    ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್: ಕರೊನಾಗೆ ನಿರ್ಮಾಪಕ ಚಂದ್ರಶೇಖರ್ ಬಲಿ

    ಬೆಂಗಳೂರು, ಎಪ್ರಿಲ್ 29: ಕನ್ನಡ ಚಿತ್ರರಂಗಕ್ಕೆ ಮಹಾಮಾರಿ ಕರೊನಾ ವೈರಸ್ ತೀವ್ರವಾಗಿ ಕಾಡುತ್ತಿದೆ. ಮೊನ್ನೆಯಷ್ಟೇ ನಟಿ ಮಾಲಾಶ್ರೀ ಪತಿ ಹಾಗೂ ಕೋಟಿ ನಿರ್ಮಾಪಕ ಖ್ಯಾತಿಯ ರಾಮು ಕರೊನಾದಿಂದ ನಿಧನರಾದರು. ಇದೀಗ ಮತ್ತೊಬ್ಬ ನಿರ್ಮಾಪಕ ಕರೊನಾಗೆ ಬಲಿಯಾಗಿದ್ದಾರೆ. ​

    ಸ್ಯಾಂಡಲ್​ವುಡ್​ನಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನೀಡಿದ ನಿರ್ಮಾಪಕ ಚಂದ್ರಶೇಖರ್ ಕರೊನಾದಿಂದ ನಿಧನರಾಗಿದ್ದಾರೆ. ಚಂದ್ರಶೇಖರ್​ ಅವರು ಅಣ್ಣಯ್ಯ, ಬಿಂದಾಸ್, ಏನೋ ಒಂಥರಾ ಹಾಗೂ ರನ್ನ‌ ಮುಂತಾದ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದಾರೆ.

    ಚಂದ್ರಶೇಖರ್​ ಅವರಿಗೆ ಕಳೆದ 23 ದಿನಗಳ ಹಿಂದೆ ಕೋವಿಡ್ ಪಾಸಿಟಿವ್​ ಆಗಿತ್ತು. ಕೂಡಲೇ ಅವರನ್ನು ಮಣಿಪಾಲ್ ಸೆಂಟರ್​ಗೆ ದಾಖಲಿಸಲಾಗಿತ್ತು. ಕೋವಿಡ್ ವಾಸಿಯಾಗಿತ್ತು ಆದ್ರೆ ಶ್ವಾಸಕೋಶದ ಸಮಸ್ಯೆ ಉಲ್ಬಣಗೊಂಡು ಇಂದು ಬೆಳಗಿನಜಾವ ನಿಧನರಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply