Connect with us

    FILM

    ಕೊಲ್ಕತ್ತಾ – ನೇಣು ಬೀಗಿದು ಆತ್ಮಹತ್ಯೆಗೆ ಶರಣಾದ ಮತ್ತೊಬ್ಬ ಬಂಗಾಳಿ ನಟಿ ಮಂಜುಷಾ ನಿಯೋಗಿ

    ಕೊಲ್ಕತ್ತಾ ಮೇ 27: ಆಘಾತಕಾರಿ ಘಟನೆಯೊಂದರಲ್ಲಿ ಮತ್ತೊಬ್ಬ ಮಾಡೆಲ್-ನಟಿ ಕೋಲ್ಕತ್ತಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಟಿ ಪಲ್ಲವಿ ಡೇ ಮತ್ತು ಮಾಡೆಲ್ ಬಿದಿಶಾ ಡಿ ಮಜುಂದಾರ್ ಆತ್ಮಹತ್ಯೆ ನಡುವೆ ಇದೀ ಮಾಡೆಲ್ ನಟಿಯೊಬ್ಬರ ನಿಗೂಢ ಸಾವು ಎಲ್ಲರನ್ನೂ ಚಕಿತಗೊಳಿಸಿದೆ,


    ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದ ಮಂಜುಷಾ ನಿಯೋಗಿ ಅವರು ಗರಿಯಾದ ಪಟುಲಿ ಎಂಬಲ್ಲಿನ ತಮ್ಮ ನಿವಾಸಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಟಿ ಟಿವಿ ಶೋಗಳಲ್ಲಿಯೂ ಕೆಲವು ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸ್ನೇಹಿತೆ ಬಿದಿಶಾ ಡಿ ಮಜುಂದಾರ್ ಸಾವಿನ ನಂತರ ಮಂಜುಷಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ಮಂಜುಷಾ ಅವರ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಇದು ಆತ್ಮಹತ್ಯೆಯೇ ಅಥವಾ ಯಾವುದಾದರೂ ಅವ್ಯವಹಾರ ನಡೆದಿದೆಯೇ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದಾರೆ.


    ಶುಕ್ರವಾರ ಬೆಳಗ್ಗೆ ಪಾಲಕರು ಕರೆ ಮಾಡಿದರೂ ಮಂಜುಷಾ ಸ್ಪಂದಿಸಿರಲಿಲ್ಲ. ನಂತರ ಆಕೆಯ ಶವ ಆಕೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಂಜುಷಾ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply