Connect with us

FILM

ಶಾಪಿಂಗ್ ಮಾಲ್ಗೆ ಹೋದ ಮಲಯಾಳಂ ನಟಿಗೆ ಲೈಂಗಿಕ ಕಿರುಕುಳ…!?

ಕೊಚ್ಚಿ ,ಕೇರಳ, ಡಿಸೆಂಬರ್ 18 : ಮಲಯಾಳಂ ನಟಿ ಅನ್ನಾ ಬೆನ್​ ಅವರು ಕೊಚ್ಚಿಯ ಶಾಪಿಂಗ್​ ಮಾಲ್​ ಒಂದರಲ್ಲಿ ತಾವು ಅನುಭವಿಸಿದ ಲೈಂಗಿಕ ದೌರ್ಜನ್ಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಶೇರ್​ ಮಾಡಿಕೊಂಡಿದ್ದಾರೆ. ಕೊಚ್ಚಿಯ ಲುಲು ಮಾಲ್​ನಲ್ಲಿ ಕುಟುಂಬದೊಂದಿಗೆ ಶಾಪಿಂಗ್​ ಮಾಡುವಾಗ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿದ್ದಾಗಿ ಇನ್​ಸ್ಟಾಗ್ರಾಂನಲ್ಲಿ ನಟಿ ಅನ್ನಾ ಶೇರ್​ ಮಾಡಿಕೊಂಡಿದ್ದಾರೆ. ಇಂತಹ ಘಟನೆಗಳು ನಡೆದಾಗ ಸರಿಯಾಗಿಯೇ ಪ್ರತಿಕ್ರಿಯಿಸಿ ಎಂದು ಕರೆ ನೀಡಿರುವ ಅನ್ನಾ, ತನ್ನ ಘಟನೆಯನ್ನು ವಿವರಿಸಿದ್ದಾರೆ.

ಲುಲು ಹೈಪರ್​ ಮಾರ್ಕೆಟ್​ನ ವಿಶಾಲವಾದ ಜಾಗದಲ್ಲೆ ಇಬ್ಬರು ವ್ಯಕ್ತಿಗಳು ನನ್ನತ್ತ ಬರುತ್ತಿದ್ದರು. ಸಾಮಾನ್ಯವಾಗಿಯೇ ಜನಸಂದಣಿ ಇತ್ತು. ಇಬ್ಬರಲ್ಲಿ ಓರ್ವ ಮುಂದೆ ಹಾದು ಹೋಗುವಾಗ ನನ್ನ ಹಿಂಬದಿಗೆ ಕೈಹಾಕಿ ಜೋರಾಗಿ ಅದುಮಿದ. ಜನಸಂದಣಿ ಇದ್ದುದ್ದರಿಂದ ತಕ್ಷಣ ಪ್ರತಿಕ್ರಿಯೆ ನೀಡಲು ಆಗಲಿಲ್ಲ. ಅಷ್ಟರಲ್ಲಾಗಲೇ ಆತ ಅಲ್ಲಿಂದ ಕಾಲ್ಕಿತ್ತಿದ್ದ ಎಂದು ಹೇಳಿದ್ದಾರೆ.

ಈಗಲೂ ಆ ಘಟನೆ ಬಗ್ಗೆ ಕೋಪವಿದೆ. ಏನು ಹೇಳಬೇಕೆಂದು ತಿಳಿಯುತ್ತಿಲ್ಲ. ಮಹಿಳೆಯಾಗಿರುವುದೇ ತುಂಬಾ ಆಯಾಸ ಎನಿಸುತ್ತಿದೆ. ಮನೆಯಿಂದ ಹೊರ ಹೋದಾಗ ಪ್ರತಿ ಕ್ಷಣವೂ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಆಗಾಗ ಬಟ್ಟೆ ನೋಡಿಕೊಳ್ಳಬೇಕು. ಕೆಳಗಡೆ ಬಾಗಿದಾಗಲೂ ಎಚ್ಚರವಹಿಸಬೇಕು.

ನೂಕು ನುಗ್ಗಲು ಇರುವಾಗಲೂ ನನ್ನ ಎದೆಯನ್ನು ನನ್ನ ಕೈಗಳಿಂದ ರಕ್ಷಿಸಿಕೊಳ್ಳಬೇಕು. ಇದನೆಲ್ಲ ನೋಡಿದಾಗ ನನ್ನ ತಾಯಿ, ಸಹೋದರಿ ಮತ್ತು ಗೆಳತಿಯರಿಗೆ ಇದೇ ರೀತಿ ಆಗಿರಬಹುದೇನೋ ಅಂದುಕೊಳ್ಳುತ್ತೇನೆ. ಇದರಿಂದಾಗಿ ಮಹಿಳೆಯಾಗಿ ಇರುವುದೇ ತ್ರಾಸದಾಯಕ ಎನಿಸುತ್ತಿದೆ ಎಂದು ಅನ್ನಾ ಬೇಸರ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಪುರಷರಿಗೆ ಕಿವಿ ಮಾತೊಂದನ್ನು ಹೇಳಿರುವ ಅನ್ನಾ, ಮಹಿಳೆಯರಿಗೆ ಮುಜುಗರ ಉಂಟಾಗುವಂತಹ ಯಾವುದೇ ಕೆಲಸವನ್ನು ಮಾಡಿದರೆ, ನೀವು ಜೀವನ ಅತ್ಯಂತ ಕೆಳಮಟ್ಟದ ವ್ಯಕ್ತಿಯಾಗಿರುತ್ತೀರ. ನರಕವನ್ನು ಹೊರತುಪಡಿಸಿ ನೀವು ಯಾವುದಕ್ಕೂ ಅರ್ಹರಾಗಿರುವುದಿಲ್ಲ ಆಕ್ರೋಶ ಹೊರಹಾಕಿದ್ದು, ಈ ಪೋಸ್ಟ್​ ನೋಡಿದ ಮೇಲೆ ಕೆಲ ಮಹಿಳೆಯರಿಗೆ ಧೈರ್ಯ ಬರುತ್ತದೆ ಅಂದುಕೊಂಡಿದ್ದೇನೆ. ಇಂತಹ ಘಟನೆಗಳು ನಿಮ್ಮ ಜೀವನದಲ್ಲಿ ನಡೆದಾಗ ಸರಿಯಾದ ಪ್ರತಿಕ್ರಿಯೆ ನೀಡಿ ಎಂದಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *