Connect with us

    FILM

    ಯಾವ ಬ್ರಾ ತೊಡುತ್ತೀರಿ ಎಂದು ಪ್ರಶ್ನಿಸಿದ ಅಭಿಮಾನಿಗೆ ಮುಜುಗರವಿಲ್ಲದೆ ಉತ್ತರಿಸಿದ ನಟಿ

    ಬಾಲಕಲಾವಿದೆಯಾಗಿ ಮಲೆಯಾಳಂ ಹಾಗೂ ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ ಅನಿಖಾ ಸುರೇಂದ್ರನ್​ ಅವರು ಸಾಮಾಜಿಕ ಜಾಲತಾಣದಲ್ಲಿ ಹಿಂಬಾಲಕರೊಬ್ಬರು ಕೇಳಿರುವ ಪ್ರಶ್ನೆಗೆ ಮುಜುಗರ ಇಲ್ಲದೇ ಉತ್ತರ ನೀಡುವ ಮೂಲಕ ಎಲ್ಲರ ಹುಬ್ಬೆರಿಸುವಂತೆ ಮಾಡಿದ್ದಾರೆ.


    19 ವರ್ಷದ ಅನಿಖಾ ಸುರೇಂದ್ರನ್ ಸಾಮಾಜಿಕ ಜಾಲತಾಣ ಇನ್ಸ್ಟಾ ಗ್ರಾಂ ನಲ್ಲಿ ಸಖತ್ ಆಕ್ಟಿವ್ ಆಗಿದ್ದು, ತಮ್ಮ ಪೋಟೋಗಳನ್ನು ಅಪ್ಲೋಡ್ ಮಾಡುತ್ತಾ ಇರುತ್ತಾರೆ. ಅಲ್ಲದೆ ತಮ್ಮ ಅಭಿಮಾನಿಗಳ ಜತೆ ಅವರು ಹೆಚ್ಚು ಕನೆಕ್ಟ್​ ಆಗಿರಲು ಪ್ರಯತ್ನಿಸಿದ್ದಾರೆ.

    ಈ ಹಿನ್ನಲೆ ಇತ್ತೀಚೆಗೆ ಅವರು ‘ಆಸ್ಕ್​ ಮಿ ಎನಿಥಿಂಗ್​’ ಸೆಶನ್​ ಆರಂಭಿಸಿದ್ದರು. ತಮ್ಮ ಹಿಂಬಾಲಕರು ಕೇಳುವ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿರುವ ಅವರ ಅದರಲ್ಲಿ ಒಬ್ಬರು ಕೇಳಿರುವ ಪ್ರಶ್ನೆಯ ಸ್ಕ್ರೀನ್ ಶಾಟ್ ನ್ನು ಫೋಸ್ಟ್ ಮಾಡಿದ್ದಾರೆ. ಅದರಲ್ಲಿ ಒಂದು ಪ್ರಶ್ನೆ ಎಲ್ಲರ ಗಮನ ಸೆಳೆದಿತ್ತು. ‘ಇದು ಸ್ವಲ್ಪ ವಿಚಿತ್ರವಾಗಿರಬಹುದು. ಆದರೆ ನನಗೆ ಬ್ರಾಗಳ ಬಗ್ಗೆ ಸಲಹೆಗಳ ಅಗತ್ಯವಿದೆ. ನೀವು ಏನು ಬಳಸುತ್ತೀರಿ? ಧನ್ಯವಾದಗಳು’ ಎಂದು ಪ್ರಶ್ನೆ ಮಾಡಿದ್ದರು ಅಭಿಮಾನಿ.


    ಈ ಪ್ರಶ್ನೆಯನ್ನು ಅನಿಖಾ ಪೋಸ್ಟ್​ ಮಾಡದೆಯೂ ಇರಬಹುದಿತ್ತು. ಆದರೆ, ಅವರು ಈ ಬಗ್ಗೆ ಯಾವುದೇ ಮುಜುಗರ ಮಾಡಿಕೊಂಡಿಲ್ಲ. ಅನಿಕಾ ಹಿಂಜರಿಕೆಯಿಲ್ಲದೆ ಪ್ರತಿಕ್ರಿಯಿಸಿದ್ದು, ಅಂದರೆ ನಾನು ಕಾಟನ್ ಬ್ರಾ ಬಳಸಲು ಶಿಫಾರಸು ಮಾಡುತ್ತೇನೆ. ಆದರೆ ನಿಜ ಹೇಳಬೇಕೆಂದರೆ ಇದು ನೋಡಲು ಭಯಾನಕವಾಗಿರುತ್ತದೆ. ನಾನು Zivame ನಂತಹ ಆನ್‌ಲೈನ್ ಸೈಟ್‌ಗಳಲ್ಲಿ ಮಾತ್ರ ಬ್ರಾ ಖರೀದಿಸುತ್ತೇನೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.


    ಅನಿಕಾ ಸುರೇಂದ್ರನ್ ಅವರ ಪ್ರತಿಕ್ರಿಯೆಯನ್ನು ನೋಡಿದ ನೆಟಿಜನ್‌ಗಳು ಈ ವಯಸ್ಸಿನಲ್ಲಿ ಈ ಸಮಚಿತ್ತತೆ, ಧೈರ್ಯ ಮತ್ತು ಸ್ಪಷ್ಟತೆ ಆಶ್ಚರ್ಯಕರವಾಗಿದೆ ಎಂದು ಹೋಗಳಿದ್ದಾರೆ. ಅಲ್ಲದೆ ಒಳ ಉಡುಪು ಕುರಿತು

    Share Information
    Advertisement
    Click to comment

    You must be logged in to post a comment Login

    Leave a Reply