Connect with us

LATEST NEWS

ನಾಳೆ ಮಂಗಳೂರಿನಲ್ಲಿ ಬಿಜೆಪಿ ಚಾಣಾಕ್ಯ ಅಮಿತ್ ಷಾ ರೋಡ್ ಶೋ

ನಾಳೆ ಮಂಗಳೂರಿನಲ್ಲಿ ಬಿಜೆಪಿ ಚಾಣಾಕ್ಯ ಅಮಿತ್ ಷಾ ರೋಡ್ ಶೋ

ಮಂಗಳೂರು ಮೇ 7: ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶದ ಬೆನ್ನಲ್ಲೆ ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಇರುವ ಹಿನ್ನಲೆಯಲ್ಲಿ ಚುನಾವಣಾ ಪ್ರಚಾರವನ್ನು ಮತ್ತಷ್ಟು ಚುರುಕುಗೊಳಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮೇ 8 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ.

ಮಂಗಳೂರು , ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ ಕ್ಷೇತ್ರಗಳಲ್ಲಿ ಮೇ 8 ರಂದು ರೋಡ್ ಶೋ ನಡೆಸಲಿದ್ದಾರೆ. ಮೇ 8 ರಂದು ಮಡಿಕೇರಿಯಿಂದ ವಿಮಾನ ಮೂಲಕ ಮಧ್ಯಾಹ್ನ ಆಗಮಿಸಲು ಅಮಿತ್ ಷಾ ನಂತರ 2.30 ಕ್ಕೆ ಮಂಗಳೂರು ಕ್ಷೇತ್ರದ ಕಾಪಿಕಾಡ್ ಬಿಜೆಪಿ ಕಚೇರಿಯಿಂದ ತೊಕ್ಕೊಟ್ಟು ಜಂಕ್ಷನ್ ವರೆಗೆ ರೋಡ್ ಶೋ ನಡೆಸಲಿದ್ದಾರೆ.

ಸಾಯಂಕಾಲ 3.45ರಿಂದ 5.45 ರವರೆಗೆ ನಗರದ ನವಭಾರತ ವೃತ್ತದಿಂದ ಪಿ.ಎಂ ರಾವ್ ರೋಡ್ ಮೂಲಕ ಟೆಂಪಲ್ ಸ್ಕ್ವಾರ್ ವರೆಗೆ ರೋಡ್ ಶೋ ನಡೆಸುವರು. ನಂತರ ಸಂಜೆ 4.45ಕ್ಕೆ ಕಾವೂರಿನಿಂದ ಮರಕಡವರೆಗೆ ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲ ರೋಡ್ ಶೋ ನಡೆಸಲಿದ್ದಾರೆ.