Connect with us

LATEST NEWS

ಮಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ

ಮಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ

ಮಂಗಳೂರು ಮೇ 6: ಬಿಸಿಲಿನ ಝಳಕ್ಕೆ ಬಳಲಿ ಬೆಂಡಾಗಿದ್ದ ಮಂಗಳೂರು ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಇಂದು ಬೆಳಿಗ್ಗೆಯಿಂದಲೇ ನಗರದಾದ್ಯಂತ ಮೋಡ ಕವಿದ ವಾತಾವರಣ ಇತ್ತು. ಸಂಜೆ ಸಮಯ ಧಾರಾಕಾರ ಮಳೆ ಸುರಿದಿದೆ. ಭಾನುವಾರ ರಜೆಯಾದ್ದರಿಂದ ಹೊರಗಡೆ ತಿರುಗಾಟಕ್ಕೆ ತೆರಳಿದ್ದವರಿಗೆ ಸುರಿದ ಮಳೆ ತೊಂದರೆಯನ್ನುಂಟು ಮಾಡಿದೆ. ಅಕಾಲಿಕವಾಗಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.