FILM
ಮಹಿಳೆಯೊಬ್ಬರಿಗೆ ಟ್ವಿಟ್ಟರ್ ನಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ ಅಮಿತಾಭ್…!
ಮುಂಬೈ, ಡಿಸೆಂಬರ್ 30 : ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದು, ದಿನವೂ ಒಂದಿಲ್ಲೊಂದು ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಅದರಲ್ಲಿಯೂ ಅವರ ತಂದೆ ಹರಿವಂಶರಾಜ್ ಬಚ್ಚನ್ ಪ್ರಸಿದ್ಧ ಕವಿಯಾಗಿದ್ದರಿಂದ ಅಮಿತಾಭ್ ಬಚ್ಚನ್ಗೂ ಕವನದ ಬಗ್ಗೆ ಅಪಾರ ಆಸಕ್ತಿ.
ಈ ಕವನ ಈ ನಟನನ್ನು ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಮಾಡಿದೆ. ಟ್ವಿಟರ್ ಮೂಲಕ ತಿಶಾ ಅಗರ್‌ವಾಲ್ ಎಂಬ ಮಹಿಳೆಗೆ ಅಮಿತಾಭ್ ಬಚ್ಚನ್ ಕ್ಷಮೆ ಕೋರಿದ್ದಾರೆ.
ಇತ್ತೀಚೆಗಷ್ಟೇ ಅಮಿತಾಭ್ ಅವರು ಕವನವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ ಅದನ್ನು ಬರೆದವರು ಯಾರು ಎಂದು ಅವರ ಹೆಸರು ನಮೂದು ಮಾಡಿರಲಿಲ್ಲ. ಈ ಕವನ ತಮಗೆ ತುಂಬಾ ಇಷ್ಟವಾಯಿತು ಎಂದು ಬರೆದುಕೊಂಡಿದ್ದರು. ಚಹ ಸೇವನೆಯಿಂದ ಮನಸ್ಸಿಗೆ ಉಂಟಾಗುವ ಅಹ್ಲಾದದ ಕುರಿತಾದ ಕವನ ಅದಾಗಿದ್ದು. ಚಹವನ್ನು ಸೇವಿಸುತ್ತಾ ಇರುವ ತಮ್ಮ ಫೋಟೋ ಜತೆ ಈ ಕವನವನ್ನು ಅಮಿತಾಭ್ ಶೇರ್ ಮಾಡಿದ್ದರು.
ಅದಕ್ಕೆ ಅವರ ಅಭಿಮಾನಿಗಳಲ್ಲಿ ಒಬ್ಬರಾಗಿರುವ ತಿಶಾ ಅಗರ್‌ವಾಲ್ ಅವರು, ‘ಸರ್, ನಿಮ್ಮ ಟ್ವಿಟ್ಟರ್ ಖಾತೆಯನ್ನು ನನ್ನ ಕವನ ನೋಡಲು ನಾನು ಪುಣ್ಯ ಮಾಡಿದ್ದೇನೆ. ಅದನ್ನು ಬರೆದವಳು ನಾನು. ನಿಮ್ಮ ಕವನದ ಜತೆಗೆ ನನ್ನ ಹೆಸರು ಇದ್ದಿದ್ದರೆ ನನ್ನ ಖುಷಿ, ಹೆಮ್ಮೆ ದುಪ್ಪಟ್ಟಾಗಿರುತ್ತಿತ್ತು’ ಎಂದು ಹೇಳಿದ್ದಾರೆ.
ಈ ಪ್ರತಿಕ್ರಿಯೆ ನೋಡಿ ಅಮಿತಾಭ್ ಹೊಸದೊಂದು ಟ್ವೀಟ್ ಮಾಡಿ ಕ್ಷಮೆ ಕೋರಿದ್ದಾರೆ. ಈ ಕವನ ಇಷ್ಟವಾಯಿತು. ಆದರೆ ಬರೆದದ್ದು ಯಾರು ಎಂದು ತಿಳಿದಿರಲಿಲ್ಲ. ಈ ಕವನದ ಟ್ವೀಟ್ ತಿಶಾ ಅಗರ್‌ವಾಲ್ ಅವರಿಗೆ ಸೇರುವುದು. ಈ ಕವನ ಯಾರು ಬರೆದಿದ್ದಾರೆ ಎಂದು ಗೊತ್ತಿರದೇ ಪೋಸ್ಟ್ ಮಾಡಿದ್ದಾಗಿ ಬಹಿರಂಗವಾಗಿ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.
ಈ ಟ್ವೀಟ್ಗೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ. ದೊಡ್ಡವರ ದೊಡ್ಡಗುಣ ಎಂದು ಅನೇಕ ಮಂದಿ ಟ್ವೀಟ್ ಮಾಡಿದ್ದಾರೆ.
Facebook Comments
You may like
-
ಶಿವಲಿಂಗಕ್ಕೆ ಕಾಂಡೋಮ್ ಹಾಕುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿ ಹಿಂದು ಭಾವನೆಗೆ ಧಕ್ಕೆ ತಂದ ನಟಿ ಸಾಯೋನಿ ಘೋಷ್ ವಿರುದ್ಧ ಭಾರೀ ಆಕ್ರೋಶ!
-
ಕೊರೊನಾ ಲಸಿಕೆ ಬಡಪಾಯಿಗಳ ಬದಲು ಮೊದಲು ಜನಪ್ರತಿನಿಧಿಗೆ, ಅಧಿಕಾರಿಗಳಿಗೆ ನೀಡಿ – ಮಾಜಿ ಆರೋಗ್ಯ ಸಚಿವರ ಸಲಹೆ
-
ಬೆಲ್ಲಿ ಡ್ಯಾನ್ಸ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾಹ್ನವಿ ಕಪೂರ್…!!
-
ಸಿಂಹದ ಮರಿಯನ್ನು ದತ್ತುಪಡೆದ ವಸಿಷ್ಠ ಸಿಂಹ
-
ಸೋನು ಸೂದ್ಗೆ ದೇವಾಲಯ ಕಟ್ಟಿದ ಅಭಿಮಾನಿಗಳು…!
-
ಶಾಪಿಂಗ್ ಮಾಲ್ಗೆ ಹೋದ ಮಲಯಾಳಂ ನಟಿಗೆ ಲೈಂಗಿಕ ಕಿರುಕುಳ…!?
You must be logged in to post a comment Login