ಮುಂಬಯಿ,ಆಗಸ್ಟ್ 04: ಕುಡಿದ ಮತ್ತಿನಲ್ಲಿ ಯುವಕರಿಬ್ಬರು ಅಂಬೋಲಿಯ ಪ್ರವಾಸಿ ಸ್ಥಳ ಕವಳೆ ಸಾದ್ ಪಾಯಿಂಟ್ನಲ್ಲಿ ಪ್ರಪಾತಕ್ಕೆ ಹಾರಿದ್ದಾರೆ.ಗೆಳೆಯನ ಸವಾಲು ಸ್ವೀಕರಿಸಿ ಗಾಡಿಂಗ್ಲಾಜ್ ಎಂಬಲ್ಲಿನ ಇಮ್ರಾನ್ ಗರ್ಡಿ ಮತ್ತು ಪ್ರಸಾದ್ ರಾಠೊಡ್ ಎಂಬ ಯುವಕರು ಪ್ರಪಾತಕ್ಕೆ ಹಾರಿಯೇ ಬಿಟ್ಟಿದ್ದಾರೆ.ಕುಡಿದ ಮತ್ತಿನಲ್ಲಿ ಯುವಕರಿಬ್ಬರು ಅಂಬೋಲಿಯ ಪ್ರವಾಸಿ ಸ್ಥಳ ಕವಳೆ ಸಾದ್ ಪಾಯಿಂಟ್ನಲ್ಲಿ ಪ್ರಪಾತಕ್ಕೆ ಹಾರಿ ದಾರುಣವಾಗಿ ಸಾವನ್ನಪ್ಪಿರುವ ದೃಶ್ಯಗಳ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಜುಲೈ 31 ಸೋಮವಾರ ಈ ಘಟನೆ ನಡೆದಿದೆ. ತಡೆಗೋಡೆ ದಾಟಿ ಇಬ್ಬರು ಹಾರಿದ್ದು ಈ ವೇಳೆ ಜನರು ಬೊಬ್ಬಿಟ್ಟಿರುವುದು ವಿಡಿಯೋದಲ್ಲಿ ಕಂಡು ಬಂದಿದೆ ಮೊಬೈಲ್ನಲ್ಲಿ ಚಿತ್ರೀಕರಿಸಿರುವ ಕೊನೆ ಕ್ಷಣದ ವಿಡಿಯೋ ಇದೀಗ ವೈರಲ್ ಆಗಿದೆ. ಅಂಬೋಲಿ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ ಪ್ರಕರಣ ದಾಖಲಾಗಿದೆ.

ವಿಡಿಯೊಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1 Shares

Facebook Comments

comments