Connect with us

DAKSHINA KANNADA

ಸ್ವಂತ ವಿಮಾನದಲ್ಲಿ ಮಹಿಳೆಯ ಏಕಾಂಗಿ ಪ್ರವಾಸ..!!

Share Information

ಮಂಗಳೂರು,ಆಗಸ್ಟ್ 04 : ಪುಟ್ಟ ವಿಮಾನದಲ್ಲಿ ಏಕಾಂಗಿಯಾಗಿ ವಿಶ್ವ ಪರ್ಯಟನೆ ಮಾಡುತ್ತಿರುವ ಅಫ್ಘಾನಿಸ್ತಾನ ಮೂಲದ ಮಹಿಳಾ ಪೈಲಟ್  29 ವರ್ಷದ ಶಹೀಸ್ಥಾ ಖಾನ್  ಅವರು ಮಂಗಳೂರು ನಗರಕ್ಕೆ ಸದ್ದಿಲ್ಲದೆ ಆಗಮಿಸಿ ಇಲ್ಲಿನ ಆತಿಥ್ಯ ಸ್ವೀಕರಿಸಿ ಪ್ರಯಾಣವನ್ನು ಮುಂದುವರಿಸಿದ್ದಾರೆ.

ಆಫ್ಘಾನಿಸ್ತಾನದ ನಿರಾಶ್ರಿತ ಆಗಿರುವ ಶಹಿಸ್ಥಾ ಅಲ್ಲಿಂದ ಪಲಾಯನಗೈದು ಪ್ರಸ್ತುತ ಅಮೇರಿಕದ  ಕ್ಯಾಲಿಫೋರ್ನಿಯಾದ ರಿಚ್ಮಂಡ್ ನಗರದಲ್ಲಿ ನೆಲೆಸಿದ್ದಾರೆ. ಹದಿನೆಂಟರ ಹರೆಯದಲ್ಲೇ ವಿಮಾನ ಚಲಾಯಿಸಿ ಗಮನ ಸೆಳೆದಿದ್ದ ಈಕೆ ಅನಂತರ ನಾಗರಿಕ ವಿಮಾನಯಾನ ಪೈಲೆಟ್ ಪರವಾನಿಗೆ ಪಡೆದುಕೊಂಡಿದ್ದರು. ಕಳೆದ ತಿಂಗಳಲ್ಲಿ ಸಿಂಗಲ್ ಇಂಜಿನ್  ಹೊಂದಿರುವ ‘ಬೀಚ್ ಕ್ರಾಫ್ಟ್ ಬೊನಾಂಜಾ ಎ-36′ ಎಂಬ ಪುಟ್ಟ ವಿಮಾನವನ್ನು ಚಲಾಯಿಸುತ್ತಾ ಸುಮಾರು  29 ಸಾವಿರ ಕಿಲೋಮೀಟರ್ ದೂರವನ್ನು ಸುತ್ತಾಡುವ ಸಾಹಸಕ್ಕೆ ಚಾಲನೆ ನೀಡಿದ್ದರು . ತೊಂಬತ್ತು ದಿನಗಳ ಪ್ರವಾಸ

ಒಟ್ಟು ತೊಂಬತ್ತು ದಿನಗಳ ಈ ಪ್ರವಾಸವನ್ನು ತನ್ನ ಹುಟ್ಟು ದೇಶವಾದ ಅಫ್ಘಾನಿಸ್ತಾನದಿಂದ ಪ್ರಾರಂಭಿಸಿರುವ ಶಹಿಸ್ಥಾ ಭಾರತ ಈಜಿಪ್ಟ್ ಸಿಂಗಾಪುರ ಸೇರಿದಂತೆ ಒಟ್ಟು ಹತ್ತೊಂಬತ್ತು ದೇಶಗಳನ್ನು ಸುತ್ತಿದ್ದಾರೆ. ಪ್ರತಿಯೊಂದು ದೇಶಕ್ಕೂ ಹೋದಾಗ ಸ್ಥಳೀಯ ಯುವ ಸಮೂಹದ ಜತೆಗೆ ಸಂವಾದ ನಡೆಸಿ ಅವರಲ್ಲಿ ವಿಜ್ಞಾನ ಹಾಗೂ ಗಣಿತ ವಿಷಯಗಳ ಬಗ್ಗೆ ಆಸಕ್ತಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಮಸ್ಕತ್ ನಿಂದ ಜುಲೈ 25 ರಂದು ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ನಗರದ ಹೋಟೆಲ್ ಒಂದರಲ್ಲಿ ಮುಂಚಿತವಾಗಿಯೇ ಕೊಠಡಿ ಬುಕ್ ಮಾಡಿಕೊಂಡಿದ್ದು. ಎರಡು ದಿನಗಳ ಕಾಲ ಮಂಗಳೂರಿನಲ್ಲಿ ದ್ದರೂ ಯಾವುದೇ ಕಾರ್ಯಕ್ರಮ ಅಥವಾ ಪ್ರವಾಸಿ ತಾಣಗಳಿಗೆ ಭೇಟಿ ನೀಡದೆ ಖಾಸಗಿ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಆದರೆ ಕರಾವಳಿಯ ತಿಂಡಿ ತಿನಿಸು ಹಾಗೂ ಭೋಜನವನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಜುಲೈ 27 ರಂದು ಬೆಳಗ್ಗೆ ಮತ್ತೆ ಮಸ್ಕತ್ ನ ಕಡೆ ಪ್ರಯಾಣ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.


Share Information
Advertisement
Click to comment

You must be logged in to post a comment Login

Leave a Reply