Connect with us

FILM

ಅಕ್ಷಯ್​ ಕುಮಾರ್ ಕೈಮುಗಿದು ಹೇಳಿದ್ದೇನು?

ಮುಂಬೈ ಅಕ್ಟೋಬರ್ 3: ಬಾಲಿವುಡ್​ನಲ್ಲಿ ಡ್ರಗ್ಸ್ ಪ್ರಕರಣದ ಸಂಬಂಧ ಇದುವರೆಗೆ ಹಲವರು ಮಾತನಾಡಿದ್ದರೂ ನಟ ಅಕ್ಷಯ್​ ಕುಮಾರ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೆ ಇದೀಗ ಅವರು ಆ ಬಗ್ಗೆ ಪ್ರತಿಕ್ರಿಯಿಸಿದ್ದು, ಬೇಸರದಿಂದಲೇ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ತುಂಬ ದಿನಗಳಿಂದ ನೋಡುತ್ತಿದ್ದೇನೆ. ಎಲ್ಲಿ ನೋಡಿದರೂ ನೆಗೆಟಿವ್​ ನೆಗೆಟಿವ್​. ಆದರೆ ಯಾರಿಗೆ ಅಂತ ಹೇಳಲಿ, ಎಷ್ಟು ಅಂತ ಹೇಳಲಿ? ಬಾಲಿವುಡ್ ಅಂದರೆ ನಮಗೆ ಬರೀ ಇಂಡಸ್ಟ್ರಿ ಅಲ್ಲ. ಅದು ನಮ್ಮ ದೇಶದ ಸಂಸ್ಕೃತಿ. ಸುಶಾಂತ್ ಸಾವಿನ ವಿಷಯ ನಮಗೂ ದುಃಖ ತಂದಿದೆ. ಆದರೆ ಒಂದು ವಿಷಯ.

ಹೃದಯದ ಮೇಲೆ ಕೈಇಟ್ಟುಕೊಂಡು ಹೇಳುತ್ತಿದ್ದೇನೆ.. ನಿಮಗೆ ಸುಳ್ಳು ಹೇಗೆ ಹೇಳಲಿ? ಬಾಲಿವುಡ್​ನಲ್ಲಿ ಡ್ರಗ್ಸ್​ ಖಂಡಿತ ಇದೆ. ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಇಲ್ಲಿಯೂ ಇದೆ. ಆದರೆ ಹಾಗೆಂದ ಮಾತ್ರಕ್ಕೆ ಯಾವುದೇ ಕ್ಷೇತ್ರದಲ್ಲಿನ ಎಲ್ಲರೂ ಹಾಗೆಯೇ ಎಂದು ಹೇಳುವುದು ಹೇಗೆ? ಹಾಗಂತ ಹೇಳಲು ಸಾಧ್ಯವಿಲ್ಲ. ಡ್ರಗ್ಸ್ ವಿಷಯದಲ್ಲಿ ಎನ್​ಸಿಬಿ ಅಧಿಕಾರಿಗಳ ಕ್ರಮ ಸರಿಯಾಗಿಯೇ ಇದೆ. ಅವರಿಗೆ ಎಲ್ಲರೂ ಸಹಕರಿಸಿ. ಆದರೆ ಇಡೀ ಬಾಲಿವುಡ್ಡನ್ನೇ ಕೆಟ್ಟ ದೃಷ್ಟಿಯಲ್ಲಿ ನೋಡಬೇಡಿ ಎಂದು ಅಕ್ಷಯ್​ ಕುಮಾರ್ ಕೈಜೋಡಿಸಿ ಬೇಡಿಕೊಂಡಿದ್ದಾರೆ.

https://twitter.com/akshaykumar/status/1312359749724196866

ಮೀಡಿಯಾದ ತಾಕತ್ತಿನ ಮೇಲೆ ನನಗೆ ವಿಶ್ವಾಸ ಇದೆ. ಅವರು ಸರಿಯಾದ ವಿಷಯದ ಮೇಲೆ ಸರಿಯಾದ ಸಮಯಕ್ಕೆ ಸ್ಪಂದಿಸದಿದ್ದರೆ ಎಷ್ಟೋ ಜನರಿಗೆ ಧ್ವನಿಯೇ ಇರುವುದಿಲ್ಲ. ಆದರೆ ಅದರಲ್ಲೂ ಸ್ವಲ್ಪ ಸೂಕ್ಷ್ಮಸಂವೇದನೆ ಇರಲಿ.. ಒಂದು ನೆಗೆಟಿವ್ ನ್ಯೂಸ್​ ಒಬ್ಬರ ಬದುಕನ್ನೇ ಬರ್ಬಾದ್ ಮಾಡಿಬಿಡುತ್ತದೆ ಎಂದು ಮಾಧ್ಯಮದವರನ್ನೂ ಕೋರಿಕೊಂಡಿರುವ ಅಕ್ಷಯ್, ಅಭಿಮಾನಿಗಳೇ.. ನಿಮ್ಮ ವಿಶ್ವಾಸ ಹಾಳು ಮಾಡಿಕೊಳ್ಳುವುದಿಲ್ಲ.. ನೀವಿದ್ದರಷ್ಟೇ ನಾವು.. ಎಲ್ಲರೂ ಜತೆಗಿರೋಣ ಎಂದೂ ಕೇಳಿಕೊಂಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *