Connect with us

UDUPI

ಕೊರೊನಾ ಸೋಂಕಿತ ವ್ಯಕ್ತಿ ಬಾವಿಗೆ ಹಾರಿ ಆತ್ಮಹತ್ಯೆ

ಕಾರ್ಕಳ ಅಕ್ಟೋಬರ್3  : ಕೊರೊನಾ ಸೋಂಕು ದೃಢಪಟ್ಟ ವ್ಯಕ್ತಿಯೊಬ್ಬರು ಮಾನಸಿಕ ನೊಂದು ಶುಕ್ರವಾರ ರಾತ್ರಿ ತಮ್ಮ ಮನೆಯ ಹಿಂದಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ಮಾರ್ಕೆಟ್ ರಸ್ತೆಯ ರಾಧಿಕಾ ಟಾಕೀಸ್ ಬಳಿಯ ನಿವಾಸಿ ಪ್ರಸನ್ನ ಆರ್ಯ(46)ಎಂಬವರು ಆತ್ಮಹತ್ಯೆ ಮಾಡಿಕೊಂಡವರು.
ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಪ್ರಸನ್ನ ಅವಿವಾಹಿತರಾಗಿದ್ದು ಒಬ್ಬಂಟಿಯಾಗಿ ಮನೆಯಲ್ಲಿ ವಾಸವಿದ್ದರು. ಕಳೆದ ನಾಲ್ಕು ದಿನದಿಂದ ಜ್ವರ ಹಾಗೂ ಬೇಧಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ಮಾಡಿದ್ದರು. ಇವರಿಗೆ ಕೊರೊನಾ ಸೋಂಕು ಖಚಿತವಾದ ಬಳಿಕ ಆಶಾ ಕಾರ್ಯಕರ್ತೆ ಔಷಧಿ ನೀಡಿ ಮನೆಯಲ್ಲೇ ಇರಲು ಸೂಚಿಸಿದ್ದರು.

ರೋಗಿಯ ಮಾನಸಿಕ ಧೈರ್ಯ ಕುಗ್ಗುತ್ತದೆ ಎನ್ನುವ ಕಾರಣಕ್ಕೆ ಪ್ರಸನ್ನ ಅವರಿಗೆ ಕೊರೊನಾ‌ ಸೋಂಕಿನ ವಿಷಯ ತಿಳಿಸಿರಲಿಲ್ಲ. ಆದರೆ ಪ್ರಸನ್ನ ಅವರು ತೀವ್ರವಾಗಿ ವಿಚಲಿತರಾಗಿ ಶುಕ್ರವಾರ ಮಧ್ಯರಾತ್ರಿ ನೊಂದು ಬಾವಿಗೆ ಹಾರಿ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.ಈ‌ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌

Facebook Comments

comments