LATEST NEWS
ವಾಯುಪಡೆಯ ಮಿರಾಜ್ ಯುದ್ದ ವಿಮಾನ ಪತನ

ಭೋಪಾಲ್ ಫೆಬ್ರವರಿ 06: ಭಾರತೀಯ ವಾಯುಪಡೆಗೆ ಸೇರಿದ ಮಿರಾಜ್ 2000′ ಯುದ್ಧ ವಿಮಾನ ಮಧ್ಯಪ್ರದೇಶದ ಶಿವಪುರಿ ಬಳಿ ಪತನವಾಗಿದೆ.
ವಿಮಾನದಲ್ಲಿದ್ದ ಪೈಲೆಟ್ ಸುರಕ್ಷಿತರಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಪತನಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Continue Reading
2 Comments