LATEST NEWS
ಮಂಗಳೂರು – ಟ್ರೇಡ್ ಲೈಸೆನ್ಸ್ ನವೀಕರಿಸದ ಅಂಗಡಿ ಮಳಿಗೆಗಳಿಗೆ ಮೇಯರ್ ಮನೋಜ್ ಕುಮಾರ್ ನೇತೃತ್ವದಲ್ಲಿ ದಾಳಿ

ಮಂಗಳೂರು ಫೆಬ್ರವರಿ 06: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಟ್ರೇಡ್ಲೈನ್ಸನ್ ನವೀಕರಣ ಮಾಡದ ಅಂಗಡಿ-ಮಳಿಗೆಗಳಿಗೆ ಮೇಯರ್ ಮನೋಜ್ ಕುಮಾರ್ ನೇತೃತ್ವದಲ್ಲಿ ದಿಢೀರ್ ಕಾರ್ಯಾಚರಣೆ ನಡೆಯಿತು.
ನಗರದ ಫಿಝಾ ಬೈ ನೆಕ್ಸ್ ಮಾಲ್ ಹಾಗೂ ಟೋಕಿಯಾ ಮಾರ್ಕೇಟ್ಗಳಿಗೆ ಮೇಯರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಕೆಲವೊಂದು ಅಂಗಡಿಗಳು ಟ್ರೇಡ್ಲೈನ್ಸನ್ ನವೀಕರಿಸದ ಹಿನ್ನಲೆಯಲ್ಲಿ ಬೀಗ ಜಡಿಯಲಾಯ್ತು. ಮಾತ್ರವಲ್ಲದೇ ಟ್ರೇಡ್ಲೈನ್ಸನ್ ನವೀಕರಣ ಮಾಡದ ಅಂಗಡಿ ಮಾಲಕಕರಿಗೆ ಮೇಯರ್ ವಾರ್ನಿಂಗ್ ನೀಡಿದರು.

ಈ ವೇಳೆ ಮಾತನಾಡಿದ ಮೇಯರ್, ಹಲವಾರು ಮಂದಿಯ ದೂರಿನ ಮೇರಿಗೆ ದಾಳಿ ಮಾಡಲಾಗಿದೆ. ಕೆಲವೊಂದು ಅಂಗಡಿಗಳಲ್ಲಿ ಟ್ರೇಡ್ಲೈನ್ಸನ್ ನವೀಕರಣ ಮಾಡದ ಹಿನ್ನಲೆಯಲ್ಲಿ ಅವರಿಗೆ ನೋಟೀಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳ ತಂಡದೊಂದಿಗೆ ದಾಳಿ ನಡೆಸಲಾಗುವುದು ಎಂದು ಹೇಳಿದರು. ಈ ವೇಳೆ ಉಪಮೇಯರ್ ಭಾನುಮತಿ, ಪಾಲಿಕೆ ಸದಸ್ಯೆ ಸುಮಿತ್ರಾ ಕರಿಯ,ಕಂದಾಯ ಅಧಿಕಾರಿ ವಿಜಯ್,ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥತರಿದ್ದರು.