FILM
ʻಗೋಲ್ಡನ್ ಗೋಬ್ಸ್ʼ ಬಳಿಕ ಎರಡೆರಡು ಪ್ರಶಸ್ತಿ ಬಾಚಿಕೊಂಡ `ಆರ್‌ಆರ್‌ಆರ್’ ಸಿನಿಮಾ
ಬೆಂಗಳೂರು, ಜನವರಿ 16: ರಾಜಮೌಳಿ ನಿರ್ದೇಶದ `ಆರ್‌ಆರ್‌ಆರ್’ ಸಿನಿಮಾ ಜಗತ್ತಿನದ್ಯಾಂತ ಸದ್ದು ಮಾಡ್ತಿದೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಾಚಿಕೊಂಡಿರುವ ಬೆನ್ನಲ್ಲೇ ಮತ್ತೊಂದು ಪ್ರಶಸ್ತಿಯನ್ನ `ಆರ್‌ಆರ್‌ಆರ್’ ಚಿತ್ರ ತನ್ನ ಮುಡಿಗೇರಿಸಿಕೊಂಡಿದೆ. ಈ ಮೂಲಕ ಅಭಿಮಾನಿಗಳಿಗೆ ಚಿತ್ರತಂಡ ಮತ್ತೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಏಲ್ಲೆಡೆ ರಾಜಮೌಳಿ ಸಿನಿಮಾ ಸೌಂಡ್ ಮಾಡ್ತಿದೆ. ಮೊನ್ನೆ ಮೊನ್ನೆಯಷ್ಟೇ ಗೋಲ್ಡನ್ ಗೋಬ್ಸ್ನಲ್ಲಿ ನಾಟು ನಾಟು ಹಾಡಿಗೆ ಪ್ರಶಸ್ತಿ ಬಾಚಿಕೊಂಡಿತ್ತು. ಈ ಬೆನ್ನಲ್ಲೇ ಮತ್ತೊಂದು ಹೆಗ್ಗಳಿಕೆಗೆ ಚಿತ್ರ ಪಾತ್ರವಾಗಿದೆ. ಕ್ರಿಟಿಕ್ಸ್ ಚಾಯ್ಸ್ನಲ್ಲಿ ಮತ್ತೆರಡು ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿದೆ.
Congratulations to the cast and crew of @RRRMovie – winners of the #criticschoice Award for Best Foreign Language Film.#CriticsChoiceAwards pic.twitter.com/axWpzUHHDx
— Critics Choice Awards (@CriticsChoice) January 16, 2023
ಕ್ರಿಟಿಕ್ಸ್ ಚಾಯ್ಸ್’ನಲ್ಲಿ ಅತ್ಯುತ್ತಮ ವಿದೇಶಿ ಭಾಷೆಯ ಸಿನಿಮಾ ಅವಾರ್ಡ್ ಹಾಗೂ ನಾಟು ನಾಟು.. ಹಾಡು ಅತ್ಯುತ್ತಮ ಒರಿಜನಲ್ ಸಾಂಗ್ ಪ್ರಶಸ್ತಿ ಪಡೆದಿದ್ದಕ್ಕೆ ಆರ್‌ಆರ್‌ಆರ್ ತಂಡಕ್ಕೆ ಧನ್ಯವಾದಗಳು ಎಂದು ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಲಾಗಿದೆ.
ರಾಜಮೌಳಿ ಆಸ್ಕರ್ ಮೇಲೆಯೂ ಕಣ್ಣಿಟ್ಟಿದ್ದಾರೆ. ಭಾರತದ ಯಾವ ಚಿತ್ರಕ್ಕೂ ಆಸ್ಕರ್ ಪ್ರಶಸ್ತಿ ಸಿಕ್ಕಿಲ್ಲ. `ಆರ್‌ಆರ್‌ಆರ್’ ಸಿನಿಮಾ ಆಸ್ಕರ್ ಅವಾರ್ಡ್ಸ್ ಪಡೆಯುವ ರೇಸ್‌ನಲ್ಲಿದೆ. ಈ ಚಿತ್ರ ಆಸ್ಕರ್ ಗೆದ್ದರೆ ಹೊಸ ದಾಖಲೆ ನಿರ್ಮಾಣ ಆಗಲಿದೆ.
You must be logged in to post a comment Login