FILM
ಬಾಲಿವುಡ್ ಜೋಡಿ ಅರ್ಜುನ್ ಕಪೂರ್ ಹಾಗೂ ಮಲೈಕಾ ಆರೊರಾಗೆ ಕೊರೊನಾ

ಮುಂಬೈ: ಬಾಲಿವುಡ್ ಜೋಡಿ ನಟ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೊರಾಗೆ ಕೊರೊನಾ ಸೊಂಕು ತಗುಲಿರುವುದು ದೃಢಪಟ್ಟಿದ್ದು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸೋಂಕು ತಗುಲಿರುವುದನ್ನು ಅರ್ಜುನ್ ಕಪೂರ್ ಖಚಿತಪಡಿಸಿದ ನಂತರ ಮಲೈಕಾ ಅರೊರಾಗೂ ಕೋವಿಡ್-19 ಪಾಸಿಟಿವ್ ಬಂದಿರುವುದನ್ನು ಆಕೆಯ ಸಹೋದರಿ ಅಮೃತಾ ಅರೋರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಬಗ್ಗೆ ಮಲೈಕಾ ಅರೋರಾ ಕೂಡಾ ಖಚಿತಪಡಿಸಿದ್ದು,ಯಾವುದೇ ರೀತಿಯ ರೋಗ ಲಕ್ಷಣ ಕಂಡುಬಂದಿಲ್ಲ, ಮನೆಯಲ್ಲಿಯೇ ಸ್ವಯಂ ಕ್ವಾರಂಟೈನಲ್ಲಿರುವುದಾಗಿ ಅವರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್-19 ಪಾಸಿಟಿವ್ ಹೊಂದಿರುವುದನ್ನು ನಟ ಅರ್ಜುನ್ ಕಪೂರ್ ಹಂಚಿಕೊಂಡಿದ್ದರು.