Connect with us

LATEST NEWS

ಎಡನೀರು ಮಠಕ್ಕೆ ಉತ್ತರಾಧಿಕಾರಿಯಾಗಿ ಜಯರಾಮ ಮಂಜತ್ತಾಯ ನೇಮಕ ಸಚ್ಚಿದಾನಂದ ಭಾರತೀತೀರ್ಥರೆಂದು ನಾಮಕರಣ

ಮಂಗಳೂರು ಸೆಪ್ಟೆಂಬರ್ 6: ಎಡನೀರು ಮಠಾಧೀಶರಾದ ಶ್ರೀ ಶ್ರೀ ಕೇಶವಾನಂದ ಭಾರತೀತೀರ್ಥ ಸ್ವಾಮಿಜಿ ನಿನ್ನೆ ಪರಂಧಾಮ ಸೇರಿದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಮಠದ ಉತ್ತರಾಧಿಕಾರಿಯಾಗಿ ಜಯರಾಮ ಮಂಜತ್ತಾಯರನ್ನು ನೇಮಿಸಲಾಗಿದೆ .


ಕಳೆದ ಅನೇಕ ವರ್ಷಗಳಿಂದ ಜಯರಾಮಣ್ಣ ಎಂದೇ ಮಠದ ಭಕ್ತ ವಲಯದಲ್ಲಿ ಚಿರಪರಿಚಿತರಾಗಿದ್ದ ಮಂಜತ್ತಾಯರು ಶ್ರೀಗಳ ಆಪ್ತಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು . ಭಾನುವಾರ ಕೇಶವಾನಂದ ಭಾರತೀತೀರ್ಥರ ಸಮಾಧಿ ಪ್ರಕ್ರಿಯೆ ಮುಗಿಯುವ. ಮೊದಲೇ ಜಯರಾಮ ಮಂಜತ್ತಾಯರನ್ನು ಉತ್ತರಾಧಿಕಾರಿಯಾಗಿ ನೇಮಿಸಿ ಸಚ್ಚಿದಾನಂದ ಭಾರತೀತೀರ್ಥ ಮಹಾಸ್ವಾಮಿಗಳೆಂದು ನಾಮಕರಣಗೈಯಲಾಗಿದೆ .

ಮಠದ ಆಸ್ಥಾನ ಪುರೋಹಿತರು , ಕುಂಟಾರು ರವೀಶ ತಂತ್ರಿ ಹಿರಣ್ಯ ವೆಂಕಟೇಶ ಭಟ್ ರಮೇಶ ಜೋಯಿಸ ಮೊದಲಾದ ವಿದ್ವಾಂಸರ ಹಿರಿತನದಲ್ಲಿ ಈ ನೇಮಕ ನಡೆದಿದೆ.