Connect with us

    DAKSHINA KANNADA

    ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯL1 ಉಪಗ್ರಹ ಉಡಾವಣೆ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಸ್ರೋ ಪ್ರಾರ್ಥನೆ..!

    ಯಶಸ್ವಿ ಚಂದ್ರಯಾನದ ಬಳಿಕ ಇದೀಗ ಇಸ್ರೋ ಮತ್ತೊಂದು ಮೈಲಿಗಲ್ಲು ಸ್ಥಾಪಿಸುವತ್ತ ದಾಪುಗಾಲು ಹಾಕುತ್ತಿದ್ದು ಶ್ರೀ ಹರಿ ಕೋಟಾದಿಂದ ಇಂದು ಬೆಳಿಗ್ಗೆ ಸೂರ್ಯನ ಬಗ್ಗೆ ಅಧ್ಯಾಯನ ನಡೆಸಲು ಬಹು ನಿರೀಕ್ಷಿತ ಆದಿತ್ಯ ಎಲ್ 1 ಉಪಗ್ರಹದ ಯಶಸ್ವಿಯಾಗಿ ಉಡಾವಣೆಯಾಗಿದೆ.

    ಸುಬ್ರಹ್ಮಣ್ಯ : ಯಶಸ್ವಿ ಚಂದ್ರಯಾನದ ಬಳಿಕ ಇದೀಗ ಇಸ್ರೋ ಮತ್ತೊಂದು ಮೈಲಿಗಲ್ಲು ಸ್ಥಾಪಿಸುವತ್ತ ದಾಪುಗಾಲು ಹಾಕುತ್ತಿದ್ದು ಶ್ರೀ ಹರಿ ಕೋಟಾದಿಂದ ಇಂದು ಬೆಳಿಗ್ಗೆ ಸೂರ್ಯನ ಬಗ್ಗೆ ಅಧ್ಯಾಯನ ನಡೆಸಲು ಬಹು ನಿರೀಕ್ಷಿತ ಆದಿತ್ಯ ಎಲ್ 1 ಉಪಗ್ರಹದ ಯಶಸ್ವಿಯಾಗಿ ಉಡಾವಣೆಯಾಗಿದೆ.

    ಈ ಉಪಗ್ರಹ ಉಡಾವಣೆಯ ಯಶಸ್ಸಿಗೆ ಕರಾವಳಿಯ ಪುರಾಣ ಪ್ರಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ ಇಸ್ರೋದ ಅಡಿಷನಲ್ ಸೆಕ್ರೆಟರಿ (ಡೈರೆಕ್ಟರ್) ಸಂಧ್ಯಾ ವೇಣುಗೋಪಾಲ್ ಶರ್ಮ ಪ್ರಾರ್ಥನೆ ಸಲ್ಲಿಸಿದ್ದಾರೆ.

    ಶುಕ್ರವಾರ ದೇವಳಕ್ಕೆ ಭೇಟಿ ನೀಡಿದ್ದ ಅವರು ಮಧ್ಯಾಹ್ನ ಮಹಾಪೂಜೆ ವೇಳೆಯಲ್ಲಿ ಇಸ್ರೋದಿಂದ ಸೂರ್ಯ ಗ್ರಹದ ಅಧ್ಯಯನಕ್ಕಾಗಿ ಉಡಾವಣೆಯಾದ ಆದಿತ್ಯ ಎಲ್ 1 ಉಪಗ್ರಹ ಮಿಷನ್ ಯಶಸ್ವಿಯಾಗಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

    ದೇವಳದ ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯರು ಅವರಿಗೆ ಶಾಲು ಹೊದಿಸಿ ಮಹಾಪ್ರಸಾದ ನೀಡಿ ಹರಸಿದರು.

    ಬಳಿಕ ಶ್ರೀ ದೇವಳದ ಆಡಳಿತ ಕಚೇರಿಗೆ ಭೇಟಿ ನೀಡಿದ ಸಂಧ್ಯಾ.ವಿ. ಶರ್ಮ ಅವರಿಗೆ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶಾಲು ಹೊದಿಸಿ ಸನ್ಮಾನಿಸಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು.

    ಅಲ್ಲದೆ ಚಂದ್ರಯಾನ 3 ಯಶಸ್ಸಿಗಾಗಿ ಶ್ರೀ ದೇವಳದಿಂದ ಅಭಿನಂದನಾ ಪತ್ರವನ್ನು ಹಸ್ತಾಂತರಿಸಿದರು.

    ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ವನಜಾ.ವಿ.ಭಟ್, ಶೋಭಾ ಗಿರಿಧರ್, ಶಿಷ್ಠಾಚಾರ ಅಧಿಕಾರಿ ಜಯರಾಂ ರಾವ್, ಮನೋಜ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply