DAKSHINA KANNADA
ಜನರ ಬಳಿ ಇರಬೇಕಾದ ಆಧಾರ್ ಕಾರ್ಡ್ …ಇಲ್ಲಿ ಹೊಟೇಲ್ ನ ಮಿನಿಹಾಲ್ ನಲ್ಲಿ ರಾಶಿ ರಾಶಿಯಾಗಿ ಬಿದ್ದಿದೆ
ಪುತ್ತೂರು ಮಾರ್ಚ್ 20: ಸರಕಾರ ಬಹುತೇಕ ಸವಲತ್ತುಗಳಿಗೆ ಆಧಾರ ಕಾರ್ಡ್ ಕಡ್ಡಾಯ ಮಾಡಿದೆ. ಹೀಗಾಗಿ ಜನ ಆಧಾರ್ ಕಾರ್ಡ್ ಗಾಗಿ ಜನ ಸರಕಾರಿ ಕಚೇರಿಗಳಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದು, ಸರಿಯಾದ ಸಮಯಕ್ಕೆ ಆಧಾರ ಕಾರ್ಡ್ ಸಿಗದೆ ಸರಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಆದರೆ ನೆಲ್ಯಾಡಿಯ ಹೋಟೆಲ್‌ವೊಂದರ ಮಿನಿ ಹಾಲ್‌ನಲ್ಲಿ ಜನರ ಹತ್ತಿರ ಇರಬೇಕಾದ ಸಾವಿರಕ್ಕೂ ಮಿಕ್ಕಿ ಆಧಾರ್ ಕಾರ್ಡ್‌ಗಳು ಸಿಕ್ಕಿದೆ.
ನೆಲ್ಯಾಡಿಯ ಹೋಟೆಲ್‌ವೊಂದರ ಮಿನಿಹಾಲ್‌ನಲ್ಲಿ ಸಭೆಯೊಂದನ್ನು ಆಯೋಜಿಸಲಾಗಿದ್ದು ಸಭೆ ನಡೆಸಲು ಹಾಲ್ ಶುಚಿಗೊಳಿಸುವ ವೇಳೆ ಹಾಲ್‌ನ ಮೂಲೆಯೊಂದರಲ್ಲಿ ಆಧಾರ್ ಕಾರ್ಡ್‌ಗಳು ರಾಶಿ ಬಿದ್ದಿರುವುದು ಕಂಡು ಬಂದಿದೆ.
ಇವೆಲ್ಲವೂ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮಕ್ಕೆ ಸಂಬಂಧಿಸಿದ ಆಧಾರ್‌ಕಾರ್ಡ್‌ಗಳಾಗಿದ್ದು 2020ರ ಆಗಸ್ಟ್ ತಿಂಗಳಿನಲ್ಲಿ ವಿತರಣೆಯಾಗಬೇಕಾಗಿತ್ತು ಎಂದು ಹೇಳಲಾಗಿದೆ. ರಾಶಿ ರಾಶಿ ಆಧಾರ್ ಕಾರ್ಡ್‌ಗಳು ಇಲ್ಲಿಗೆ ಹೇಗೆ ಬಂದಿವೆ ಎಂಬುದರ ಬಗ್ಗೆ ಈ ಹೋಟೆಲ್ ಮಾಲಕರಿಗೂ ಮಾಹಿತಿ ಇಲ್ಲ.
ಕೂಡಲೇ ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ಈ ಕೆಲಸ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬುದೇ ಸಾರ್ವಜನಿಕರ ಆಗ್ರಹಿಸಿದ್ದಾರೆ.