Connect with us

KARNATAKA

ಉಪಚುನಾವಣಾ ಸಭೆಗಳಿಗಿಲ್ಲ ಕೊರೊನಾ ಮಾರ್ಗಸೂಚಿ- ಸಿಎಂ ಬಿಎಸ್ ವೈ

ಬೆಂಗಳೂರು ಮಾರ್ಚ್ 20: ಕೊರೊನಾ ಮಾರ್ಗಸೂಚಿಗಳು ಕೇವಲ ಜನಸಾಮಾನ್ಯರಿಗೆ ಮಾತ್ರ ಅನ್ವಯವಾಗಲಿದ್ದು, ಉಪ ಚುನಾವಣೆಯಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ಕೊರೊನಾದ ಯಾವುದೇ ಮಾರ್ಗಸೂಚಿ ಅಪ್ಲೈ ಆಗೋದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.


ತಿಪಟೂರಿನಲ್ಲಿ ಮಾತನಾಡಿದ ಸಿಎಂ, ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಕಾರ್ಯಕ್ರಮಕ್ಕೆ ಮಿತಿ ಷರತ್ತು ಹಾಕಿದ್ದೇವೆ. ಸಾರ್ವಜನಿಕ ಸಭೆಗಳಿಗೆ ಯಾವುದೇ ನಿಬಂಧನೆ ಹಾಕಿಲ್ಲ ಅಂತರ ಕಾಯ್ದುಕೊಂಡು, ಮಾಸ್ಕ್ ಹಾಕಿಕೊಂಡು ಎಚ್ಚರಿಕೆಯಿಂದ ಕಾರ್ಯಕ್ರಮ ಮಾಡಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ಶಾಲಾ-ಕಾಲೇಜು ಬಂದ್ ಮಾಡುವ ಯೋಚನೆ ಇಲ್ಲ. ಒಂದು ವಾರ ತಡೆದು ಜನ ಸುಧಾರಿಸದೇ ಇದ್ದರೆ ಅಥವಾ ಕೋವಿಡ್ ಸಂಖ್ಯೆ ಜಾಸ್ತಿ ಆಗ್ತಿದ್ರೆ ಪರಿಸ್ಥಿತಿ ನೋಡಿ ತೀರ್ಮಾನ ತೆಗೆದುಕೊಳ್ಳುವುದಾಗಿ ಸಿಎಂ ಹೇಳಿದ್ದಾರೆ.

Advertisement Advertisement
Click to comment

You must be logged in to post a comment Login

Leave a Reply