Connect with us

    FILM

    ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಖ್ಯಾತ ಗಾಯಕಿ ಮಲ್ಲಿಕಾ ರಜಪೂತ್

    ಸುಲ್ತಾನ್ ಪುರ ಫೆಬ್ರವರಿ 14: ಖ್ಯಾತ ಗಾಯಕಿ ಹಾಗೂ ನಟಿ ವಿಜಯ ಲಕ್ಷ್ಮಿ ಅಲಿಯಾಸ್ ಮಲ್ಲಿಕಾ ರಜಪೂತ್ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.


    ಉತ್ತರ ಪ್ರದೇಶದ ಸುಲ್ತಾನಪುರದ ಮಲ್ಲಿಕಾರ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಲ್ಲಿಕಾರ ಮೃತದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಾಣುತ್ತಿದೆ ಎಂದು ಪೊಲೀಸರು ಹೇಳಿದ್ದು, ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ಬಳಿಕವೇ ಸಾವಿಗೆ ನಿಜವಾದ ಕಾರಣ ತಿಳಿದು ಬರಲಿದೆ ಎಂದಿದ್ದಾರೆ.

    ಸಾಕಷ್ಟು ಸಿನಿಮಾಗಳಿಗೆ ಹಾಡಿದ್ದ 35 ವರ್ಷದ ಗಾಯಕಿ ಕಮ್ ನಟಿ ಮಲ್ಲಿಕಾ ರಜಪೂರ್ , ‘ರಿವಾಲ್ವರ್ ರಾಣಿ’ ಸಿನಿಮಾದಲ್ಲಿ ಕಂಗನಾ ರಣೌತ್ ಜೊತೆ ನಟಿಸಿದ್ದರು. ಗಾಯಕಿಯೂ ಆಗಿದ್ದ ಮಲ್ಲಿಕಾ ಶಾನ್​ರ ಆಲ್ಬಂನಲ್ಲಿ ಹಾಡಿದ್ದರು, ನಟಿಸಿದ್ದರು ಸಹ. ಕಥಕ್ ನೃತ್ಯಗಾರ್ತಿಯೂ ಆಗಿದ್ದ ಮಲ್ಲಿಕಾ ನೃತ್ಯ ಪ್ರದರ್ಶನಗಳನ್ನು ಸಹ ನೀಡಿದ್ದಾರೆ. ರಾಜಕೀಯದಲ್ಲಿಯೂ ಆಸಕ್ತಿ ಇರಿಸಿಕೊಂಡಿದ್ದ ಮಲ್ಲಿಕಾ 2022ರಲ್ಲಿ ಉತ್ತರ ಪ್ರದೇಶ ಬಿಜೆಪಿ ಸೇರ್ಪಡೆಗೊಂಡಿದ್ದರು, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನವನ್ನು ಸಹ ಅವರಿಗೆ ನೀಡಲಾಗಿತ್ತು. ಆದರೆ ಇತ್ತೀಚೆಗೆ ಬಿಜೆಪಿಯಿಂದ ದೂರ ಉಳಿದಿದ್ದ ಮಲ್ಲಿಕಾ ಅಧ್ಯಾತ್ಮದ ಕಡೆಗೆ ಹೊರಳಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply