LATEST NEWS
ಕಾಪು ಮಾರಿಯಮ್ಮನ ದರ್ಶನ ಪಡೆದ ಖ್ಯಾತ ನಟಿ ಪೂಜಾ ಹೆಗ್ಡೆ

ಕಾಪು ಮಾರ್ಚ್ 05: ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರು ಉಡುಪಿಗೆ ಬಂದಿದ್ದಾರೆ. ಕಾಪು ಮಾರಿಯಮ್ಮನ ಸನ್ನಿಧಾನಕ್ಕೆ ಅವರು ಭೇಟಿ ನೀಡಿದ್ದಾರೆ. ಕುಟುಂಬಸ್ಥರ ಜೊತೆ ಆಗಮಿಸಿದ ಪೂಜಾ ಹೆಗ್ಡೆ ಅವರು ಹೊಸ ಮಾರಿಗುಡಿ ಸನ್ನಿಧಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದಲ್ಲಿರುವ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ ಕೊನೆಯ ದಿನವಾದ ಇಂದು ಪೂಜಾ ಹೆಗ್ಡೆ ಕುಟುಂಬಸ್ಥರೊಂದಿಗೆ ಆಗಮಿಸಿ ಸೇವೆ ಸಲ್ಲಿಸಿದ್ರು. ಬ್ರಹ್ಮಕಲಶೋತ್ಸವ ಕೊನೆಯ ದಿನ ದೇವಳದಿಂದ ಪೂಜಾ ಹೆಗ್ಡೆ ಅವರನ್ನ ಗೌರವಿಸಲಾಯಿತು.
