Connect with us

  FILM

  ಪ್ಲೀಸ್..ನನ್ನ ಗ್ಲಾಮರಸ್ ಪೋಟೋಗಳನ್ನು ಶೇರ್ ಮಾಡಬೇಡಿ -ಸಂಪೂರ್ಣವಾಗಿ ಬದಲಾದ ನಟಿ ಮಮ್ತಾಜ್

  ಚೆನ್ನೈ ಎಪ್ರಿಲ್ 06: ತಮಿಳು ತೆಲುಗು ಮಲೆಯಾಳಂ ಚಿತ್ರರಂಗದಲ್ಲಿ ತನ್ನ ಮೈಮಾಟ ಹಾಗೂ ಐಟಂ ಡ್ಯಾನ್ಸ್ ನಿಂದ ಪ್ರಖ್ಯಾತಿ ಹೊಂದಿದ್ದ ನಟಿ ಮಮ್ತಾಜ್ ಇದೀಗ ಸಂಪೂರ್ಣ ಬದಲಾಗಿದ್ದಾರೆ. ಸಿನೆಮಾಗಳಿಂದ ದೂರ ಹೊದ ಬಳಿಕ ಇದೀಗ ಮಮ್ತಾಜ್ ಇಸ್ಲಾಂ ಪದ್ದತಿಯಲ್ಲಿ ಜೀವನ ನಡೆಸುತ್ತಿದ್ದಾರೆ.


  ಇತ್ತೀಚೆಗೆ ಸಾಮಾಜಿಕ ಜಾಲತಾಣವೊಂದಕ್ಕೆ ಸಂದರ್ಶನ ನೀಡಿರುವ ಅವರು ತಮ್ಮ ಅಭಿಮಾನಿಗಳಿಗೆ ಒಂದು ಮನವಿ ಮಾಡಿದ್ದಾರೆ.ಯಾರೂ ನನ್ನ ಗ್ಲಾಮರಸ್ ಪೋಟೋಗಳನ್ನು ಶೇರ್ ಮಾಡಬೇಡಿ ಅಂದಿದ್ದಾರೆ. ಯಾರೂ ಗೂಡ ನನ್ನನ್ನು ಗ್ಲಾಮರಸ್ ರೀತಿಯಲ್ಲಿ ನೋಡಬಾರದು ಅಲ್ಲದೆ ನಾನು ಸತ್ತರೆ ಕೂಡ ಅಂತಹ ಪೋಟೋಗಳನ್ನು ಶೇರ್ ಮಾಡಬೇಡಿ ಎಂದಿದ್ದಾರೆ. ಒಂದು ವೇಳೆ ನನ್ನ ಹತ್ತಿರ ಸಾಕಷ್ಟು ಹಣ ಇದ್ದರೆ ನಾನು ಮಾಡಿದ ಎಲ್ಲಾ ಸಿನೆಮಾಗಳನ್ನು ಖರೀದಿಸಿ ಅದರ ವಿಡಿಯೋಗಳನ್ನು ನಾನು ತೆಗೆದು ಹಾಕುತ್ತೇನೆ ಎಂದಿದ್ದಾರೆ.

  ಸಿನೆಮಾಗಳಲ್ಲಿ ಹಾಟ್ ಹಾಟ್ ಆಗಿ ಕಾಣಿಸುತ್ತಿದ್ದ ನಟಿ ಮಮ್ತಾಜ್ ಇದೀಗ ಸಂಪೂರ್ಣ ಬದಲಾಗಿದ್ದಾರೆ. ಇಸ್ಲಾಂ ಜೀವನ ಶೈಲಿಯಲ್ಲಿ ಬದುಕುತ್ತಿರುವ ಅವರು ಬುರ್ಖಾ ನನ್ನ ಪೇವರೆಟ್ ಬಟ್ಟೆ ಅಂದಿದ್ದಾರೆ. ಅಲ್ಲದೆ ವಿದೇಶಕ್ಕೆ ಪ್ರವಾಸಕ್ಕೆ ಹೋಗುವುದಿದ್ದರೆ ನಾನು ಮಕ್ಕಾ ಮದೀನಾಕ್ಕೆ ಮಾತ್ರ ಹೋಗಬೇಕೆಂದಿದ್ದೇನೆ. ನಾನು ಬೇರೆಲ್ಲಿಯೂ ಹೋಗಲು ಬಯಸುವುದಿಲ್ಲ ಎಂದಿದ್ದಾರೆ. ಇನ್ನು ತಮಗೆ ಬಂದಿರುವ ಖಾಯಿಲೆ ಬಗ್ಗೆ ಮಾತನಾಡಿರುವ ಮಮ್ತಾಜ್ ಒಂದು ದಿನ ನನಗೆ ತೀವ್ರವಾದ ಬೆನ್ನು ನೋವು ಕಾಣಿಸಿಕೊಂಡಿತು. ನಾನು ನಡೆಯಲು ಸಾಧ್ಯವಾಗಲಿಲ್ಲ. ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿದರೂ ನೋವು ಕಡಿಮೆಯಾಗಿಲ್ಲ. ಎರಡು ವರ್ಷ ಆ ನೋವನ್ನು ಸಹಿಸಿಕೊಂಡೆ. ಅದರ ನಂತರ, ನನಗೆ ಆಟೋಇಮ್ಯೂನ್ ಕಾಯಿಲೆ ಇದೆ ಎಂದು ವೈದ್ಯರು ಹೇಳಿದರು. ಹಲವು ದಿನಗಳಿಂದ ನೋವಿನಿಂದ ಬಳಲುತ್ತಿದ್ದೆನೆ. ನಾನು ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ಸರಿಯಾಗಿ ನಿಲ್ಲಲಾಗಲಿಲ್ಲ. ದೇಹ ಸರಿಸಲು ಕಷ್ಟವಾಗುತ್ತಿದೆ ಎಂದು ಮುಮ್ತಾಜ್ ಅಳಲು ತೋಡಿಕೊಂಡರು.

  ಒಮ್ಮೊಮ್ಮೆ ಖಿನ್ನತೆಗೆ ಒಳಗಾಗಿದ್ದೆ.. ನೋವಿನಿಂದ ಅಳುತ್ತಿದ್ದೆ. ದಿನವಿಡೀ ಅಳುತ್ತಿದ್ದೆ. ಮನೆಯವರು ನನ್ನ ಜೊತೆ ನಿಲ್ಲಲಿಲ್ಲ.. ಅದರಿಂದ ಸಾಯುವ ಪ್ರಯತ್ನವನ್ನೂ ಮಾಡಿದ್ದೆ ಎಂದು ಮುಮ್ತಾಜ್ ಭಾವುಕರಾದರು.

  Share Information
  Advertisement
  Click to comment

  You must be logged in to post a comment Login

  Leave a Reply