Connect with us

    KARNATAKA

    ಕರ್ನಾಟಕ ವಿಧಾನಸಭೆ ಚುನಾವಣೆ ಮೊದಲ ಮತದಾನ ಮಾಡಿದ ನಟಿ ಲೀಲಾವತಿ

    ನೆಲಮಂಗಲ ಎಪ್ರಿಲ್ 29: ರಾಜ್ಯದಲ್ಲಿ ಇನ್ನೂ ಚುನಾವಣೆಯ ಪ್ರಚಾರದ ಭರಾಟೆನೆ ಮುಗಿದಿಲ್ಲ, ಆದರೆ ಇಲ್ಲೊಬ್ಬರು ಈಗಾಗಲೇ ಚುನಾವಣೆಗೆ ಮತದಾನ ಮಾಡಿದ್ದಾರೆ. ಹೌದು ಹಿರಿಯ ನಟಿ ಲೀಲಾವತಿ ಅವರು ಕರ್ನಾಟಕ ವಿಧಾನಸಭಾ ಚುನಾವಣೆಗೆ ತಮ್ಮ ಮೊದಲ ಮತದಾನ ಮಾಡಿದ್ದಾರೆ.


    ಮೇ 10ರಂದು ಮತದಾನ ದಿನಾಂಕ ಘೋಷಣೆ ಆಗಿದ್ದರೂ, ಚುನಾವಣೆ ಆಯೋಗ ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯ ಕಲ್ಪಿಸಿರುವುದರಿಂದ ಇಂದು ಲೀಲಾವತಿ ಅವರು ಮತದಾನ ಮಾಡಿದ್ದಾರೆ. ಈ ಬಾರಿಯ ಮತದಾನ ಮಾಡಿದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಎಂಭತ್ತು ವರ್ಷ ತುಂಬಿದ ನಾಗರಿಕರಿಗೆ ಮನೆಯಲ್ಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದೆ ಚುನಾವಣೆ ಆಯೋಗ. ಇದರ ಅಡಿಯಲ್ಲಿ ಹಿರಿಯ ನಟಿ ಲೀಲಾವತಿ, ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ಮನೆಯಲ್ಲಿ ಮತದಾನ ಮಾಡಿದ್ದಾರೆ. ಮಗ ವಿನೋದ್ ರಾಜ್ ಸಹಾಯದಿಂದ ಅವರು ಮನೆಯಲ್ಲಿ ಮತದಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಲೀಲಾವತಿ, ‘ಚುನಾವಣೆ ಆಯೋಗ ಈ ಅವಕಾಶ ಕಲ್ಪಿಸಿದ್ದು ನನ್ನಂತಹ ಹಿರಿಯರಿಗೆ ಅನುಕೂಲವಾಗಿದೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಎಲ್ಲರೂ ಮತದಾನದ ಪ್ರಕ್ರಿಯೆಯಲ್ಲಿ ಭಾಗಿಯಾಗಿ’ ಎಂದು ಹೇಳಿದರು. ಮತದಾನ ಮನೆಯಲ್ಲೇ ಮಾಡಿದ್ದು ಸಂಭ್ರಮ ತಂದಿದೆ ಎಂದಿದ್ದಾರೆ. ಚುನಾವಣಾ ಅಧಿಕಾರಿಗಳ ಸಮ್ಮುಖದಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply