FILM
ಅಭಿಮಾನಿಗಳಿಗಾಗಿಯೇ ಮತ್ತೆ ಹಾಟ್ ಅವತಾರ ಎತ್ತಿದ ಜ್ಯೋತಿ ರೈ
ಬೆಂಗಳೂರು ಅಗಸ್ಟ್ 22: ಸದಾ ಹಾಟ್ ಪೋಟೋಗಳ ಮೂಲದ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಗ್ ನಲ್ಲಿರುವ ಕಿರುತೆರೆ ನಟಿ ಜ್ಯೋತಿ ರೈ ಇದೀಗ ಸಖತ್ ಗ್ಲಾಮರಸ್ ಆಗಿ ಪೋಸ್ ನೀಡಿರುವ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ವಾವ್ ಎಂದಿದ್ದಾರೆ.
ಕಿರುತೆರೆ ನಟಿಯಾಗಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಜ್ಯೋತಿ ರೈ ಸಾಮಾಜಿಕ ಜಾಲತಾಣದಲ್ಲಿ ಸದಾ ಹಾಟ್ ಹಾಟ್ ಪೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅಭಿಮಾನಿಗಳ ಕಣ್ಮನ ಸೆಳೆಯುವಂತಹ ರೀತಿಯಲ್ಲಿ ಫೋಟೋಶೂಟ್ ಮಾಡಿಸುತ್ತಿದ್ದಾರೆ. ಅವರ ಅನೇಕ ಫೋಟೋಗಳು ವೈರಲ್ ಆಗುತ್ತಿವೆ.
ಇನ್ಸ್ಟಾಗ್ರಾಮ್ನಲ್ಲಿ ಜ್ಯೋತಿ ರೈ ಅವರು ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿ ಆಗುತ್ತಿದ್ದಾರೆ. ವೈರಲ್ ಫೋಟೋಗಳಿಗೆ ನೆಟ್ಟಿಗರು ಬಗೆಬಗೆಯ ಕಮೆಂಟ್ ಮಾಡುತ್ತಿದ್ದಾರೆ.
ಜ್ಯೋತಿ ರೈ ಅವರ ಪಳಪಳ ಹೊಳೆಯುವ ಗೋಲ್ಡನ್ ಬಣ್ಣದ ಡ್ರೆಸ್ ಧರಿಸಿದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಪಡ್ಡೆ ಹುಡುಗರ ನಿದ್ದೆ ಹಾರಿ ಹೋಗುವಂತಿರುವ ಈ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ಸಿಕ್ಕಿದೆ.
ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ‘ಗ್ಲಾಮರ್ ಕ್ವೀನ್’ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಮೆಂಟ್ಗಳ ಮೂಲಕ ಫ್ಯಾನ್ಸ್ ಹೊಗಳುತ್ತಿದ್ದಾರೆ. ವೈಯಕ್ತಿಕ ಕಾರಣಗಳಿಂದಲೂ ಜ್ಯೋತಿ ಅವರು ಆಗಾಗ ಸುದ್ದಿ ಆಗುತ್ತಾರೆ.
ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲಿಯೂ ಜ್ಯೋತಿ ರೈ ಅವರಿಗೆ ಸಖತ್ ಬೇಡಿಕೆ ಇದೆ. ಅನೇಕ ಸೀರಿಯಲ್ಗಳಲ್ಲಿ ನಟಿಸಿರುವ ಅವರು ಅನುಭವಿ ಕಲಾವಿದೆ ಆಗಿದ್ದಾರೆ. ಹಲವು ಆಫರ್ಗಳು ಜ್ಯೋತಿ ರೈ ಅವರ ಕೈಯಲ್ಲಿವೆ.
You must be logged in to post a comment Login