Connect with us

FILM

ಏಳು ಸಲ ಗರ್ಭಪಾತ ಮಾಡಿಸಿದ: ರಾಜಕಾರಣಿ ಸೀಮನ್ ವಿರುದ್ಧ ನಟಿ ಜಯಲಕ್ಷ್ಮಿ ಆರೋಪ

Share Information

ಕನ್ನಡದ ನಾಗಮಂಡಲ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟಿ ವಿಜಯಲಕ್ಷ್ಮಿ, ತಮಿಳುನಾಡಿನ ಹೆಸರಾಂತ ರಾಜಕಾರಣಿ ಸೀಮನ್ ವಿರುದ್ಧ ಮತ್ತೆ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಅವರು ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದಾರೆ. ತಮ್ಮನ್ನು ಸೀಮನ್ ಮದುವೆಯಾಗಿ ಏಳು ಬಾರಿ ಗರ್ಭಪಾತ ಮಾಡಿಸಿದ್ದಾನೆ ಎಂದು ಅವರು ದೂರಿನಲ್ಲಿ ಬರೆದಿದ್ದಾರೆ.

ತಿರುವಳ್ಳೂರಿನ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆಯನ್ನೂ ನೀಡಿರುವ ನಟಿ ವಿಜಯಲಕ್ಷ್ಮಿ, ‘2000ರಲ್ಲಿ ತಾವು  ನಾಮ್‍ ತಮಿಳರ್ ಕಟ್ಚಿ (ಎನ್.ಟಿಕೆ) ನಾಯಕರೂ ಆಗಿರುವ ಸೀಮನ್ ಜೊತೆ ಮದುವೆಯಾಗಿದ್ದೇನೆ.  ಆನಂತರ ಅವರು ನನಗೆ ಮೋಸ ಮಾಡುತ್ತಲೇ ಹೋದರು. ನನ್ನ ಚಿನ್ನಾಭರಣ ದೋಚಿದರು. ಏಳು ಬಾರಿ ಗರ್ಭಪಾತ ಮಾಡಿಸಿದ್ದಾರೆ. ಅವರಿಂದ ನನಗೆ ಲೈಂಗಿಕ ದೌರ್ಜನ್ಯ ಕೂಡ ಆಗಿದೆ’ ಎಂದು ಹೇಳಿಕೆ ದಾಖಲಿಸಿದ್ದಾರೆ.

ಚೆನ್ನೈನ ಪೊಲೀಸ್ ಆಯುಕ್ತರ ಸಹಾಯ ಪಡೆದುಕೊಂಡು ದೂರು ದಾಖಲಿಸಿದ್ದ ವಿಜಯಲಕ್ಷ್ಮಿ ತಮಗೆ ನ್ಯಾಯ ದೊರಕಿಸಿ ಕೊಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ, ನಿನ್ನೆ ಕೂಡ ಫೇಸ್ ಬುಕ್ ಲೈವ್ ಗೆ ಬಂದು, ಈ ವಿಚಾರವನ್ನೂ ಮಾತನಾಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸ್ ಅಧಿಕಾರಿಗಳು ಸೀಮನ್ ಅವರಿಗೆ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ಈ ಘಟನೆಯ ಕುರಿತು ವಿಜಯಲಕ್ಷ್ಮಿ ಪರ ಹೋರಾಟ ಮಾಡುತ್ತಿರುವ ತಮಿಳರ್ ಮುನ್ನೆಟ್ರ ಪಡೈಯ ಅಧ್ಯಕ್ಷೆ ವೀರಲಕ್ಷ್ಮಿ ಕೂಡ ಪ್ರತಿಕ್ರಿಯೆ ನೀಡಿದ್ದು, ಹಲವಾರು ವರ್ಷಗಳಿಂದ ಈ ಕುರಿತು ಹೋರಾಟ ಮಾಡುತ್ತಿದ್ದೇವೆ. ಅವರು ಪ್ರಭಾವಿ ರಾಜಕಾರಣಿ ಆಗಿರುವುದರಿಂದ ನ್ಯಾಯ ಸಿಗುತ್ತಿಲ್ಲ. ಈ ಬಾರಿ ನಮಗೆ ಶಿಕ್ಷೆ ಕೊಡಿಸುತ್ತೇವೆ ಎಂಬ ನಂಬಿಕೆ ಬಂದಿದೆ ಎಂದಿದ್ದಾರೆ.


Share Information
Advertisement
Click to comment

You must be logged in to post a comment Login

Leave a Reply