Connect with us

    FILM

    ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸಿದ್ದ ನಟಿ ಮದುವೆಯಾದ 4 ವರ್ಷಗಳಲ್ಲೇ ಡೈವೋರ್ಸ್

    ಬೆಂಗಳೂರು ಮೇ 09: ಬಹುಭಾಷಾ ನಟಿ ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ಮೊದಲ ಸಲ ಸಿನೆಮಾದಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದ ನಟಿ ಭಾವಾ ಇದೀಗ ತಮ್ಮ ನಾಲ್ಕು ವರ್ಷದ ದಾಂಪತ್ಯ ಅಂತ್ಯಗೊಳಿಸಿದ್ದಾರೆ.


    ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಭಾಮಾ, ಸಿಂಗಲ್ ಮಾಮ್‌ ಆಗುವವರೆಗೂ ನಾನು ಇಷ್ಟೊಂದು ಗಟ್ಟಿಗಿತ್ತಿ ಎಂದು ನನಗೆ ತಿಳಿದಿರಲಿಲ್ಲ. ಗಟ್ಟಿಯಾಗಿರುವುದು ಬಿಟ್ಟರೆ ನನಗೆ ಬೇರೆ ಆಯ್ಕೆಗಳಿಲ್ಲ. ನಾನು ಮತ್ತು ನನ್ನ ಮಗಳು ಅಷ್ಟೇ’ ಎಂದು ಮಗಳೊಂದಿಗಿನ ಫೋಟೊ ಹಂಚಿಕೊಂಡಿದ್ದಾರೆ. 2020ರಲ್ಲಿ ಉದ್ಯಮಿ ಅರುಣ್‌ ಜಗದೀಶ್ ಎಂಬುವವರನ್ನು ವರಿಸಿದ್ದ ಭಾಮಾ ಅವರು ನಾಲ್ಕೇ ವರ್ಷದಲ್ಲಿ ವಿವಾಹ ಮುರಿದು ಬೀಳಲು ಕಾರಣವೇನು ಎಂಬ ಬಗ್ಗೆ ತಿಳಿಸಿಲ್ಲ. ಅವರಿಗೆ ಗೌರಿ ಎಂಬ ಹೆಸರಿನ ಹೆಣ್ಣು ಮಗುವಿದೆ. 2007ರಲ್ಲಿ ಸಿನಿಮಾ ಬದುಕಿಗೆ ಕಾಲಿಟ್ಟ ಭಾಮಾ ಇದುವರೆಗೂ ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ 42 ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಮೊದಲ ಸಲ’ ಚಿತ್ರದ ಮೂಲಕ ಭಾಮಾ ಕನ್ನಡಕ್ಕೆ ಪ್ರವೇಶಿಸಿದ್ದರು. ಅದಾದ ಬಳಿಕ ಶೈಲೂ, ಆಟೋ ರಾಜ ಮುಂತಾದ ಚಿತ್ರಗಳಲ್ಲಿಯೂ ನಟಿಸಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *