Connect with us

FILM

ಬಿಗ್ ಬಾಸ್ ಸ್ಪರ್ಧಿ, ರಂಗ ಕಲಾವಿದೆ ಅಕ್ಷತಾ ಪಾಂಡವಪುರ ಪ್ರೆಗ್ನೆನ್ಸಿ ಫೋಟೋ ಶೂಟ್

ಬೆಂಗಳೂರು: ಬಿಗ್‍ಬಾಸ್ ಸ್ಪರ್ಧಿ, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಂತಸದ ಸುದ್ದಿಯನ್ನ ಸೋಶಿಯಲ್ ಮೀಡಿಯಾ ಮುಖಾಂತರ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.


ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಅವರು ಸೋಶಿಯಲ್‌ ಮೀಡಿಯಾ ಮೂಲಕ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. 2021ರ ಜನವರಿಯಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಅವರು ಗರ್ಭಿಣಿ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಸ್ನೇಹಿತರು, ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಶುಭಕೋರುತ್ತಿದ್ದಾರೆ.


ಹೊಸ ಬೆಳಕಿನ ನಿರೀಕ್ಷೆ: ಬದುಕೆಂಬ ಪುಸ್ತಕದಲ್ಲಿ ಮುಂದಿನ ಅಧ್ಯಾಯಕ್ಕೆ ಕೆಲವೇದಿನಗಳು ಬಾಕಿ.ಹೊಸವರ್ಷ ಹೊಸಬೆಳಕಿನ ನಿರೀಕ್ಷೆಯಲ್ಲಿದ್ದೇವೆ. ಈ ವಿಸ್ಮಯ ಜಗತ್ತಿನಲ್ಲಿ ಮತ್ತೊಂದು ವಿಸ್ಮಯ ಅಂದ್ರೆ ಮತ್ತೆಂದೂ ಬಾರದ ಈ ಘಳಿಗೆ…ಇನ್ನೂ ಜನವರಿ 2021ಕ್ಕೆ ಮತ್ತೊಂದು ವಿಶೇಷ ಘಳಿಗೆಯ ನಿರೀಕ್ಷೆಯಲ್ಲಿರೋದಾಗಿ ಅಕ್ಷತಾ ತಮ್ಮ ಎಫ್‍ಬಿಯಲ್ಲಿ ಬರೆದುಕೊಂಡಿದ್ದಾರೆ.


ಗರ್ಭಿಣಿಯಾಗಿರುವ ಅಕ್ಷತಾ ಫೋಟೋಶೂಟ್ ಸಹ ಮಾಡಿಸಿಕೊಂಡಿದ್ದು, ಜನವರಿಯಲ್ಲಿ ಮಗುವಿನ ಆಗಮನವಾಗಲಿದೆ ಎಂದು ತಿಳಿಸಿದ್ದಾರೆ. ಕೆಂಪು-ಹಳದಿ ಬಾರ್ಡರಿನ ಕಪ್ಪು ಬಣ್ಣದ ಸೀರೆ ತೊಟ್ಟು, ದೊಡ್ಡ ಕತ್ತಿನ ಸರ ಮತ್ತು ಮೂಗುತಿ ತೊಟ್ಟು ಅಕ್ಷತಾ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.


ಮೂಲತಃ ರಂಗಭೂಮಿ ಕಲಾವಿದೆ ಆಗಿರುವ ಅಕ್ಷತಾ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಪಲ್ಲಟ’ ಸಿನಿಮಾದಲ್ಲಿನ ನಟನೆಗಾಗಿ ಅವರಿಗೆ ‘ಅತ್ಯುತ್ತಮ ಫೋಷಕ ನಟಿ’ ರಾಜ್ಯ ಪ್ರಶಸ್ತಿ ಸಿಕ್ಕಿದೆ. ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 6’ರಲ್ಲಿ ಅವರು ಸ್ಪರ್ಧಿಸಿದ್ದರು.
ಅಕ್ಷತಾ ಪತಿ ಪ್ರಸನ್ ಸಾಗರ್ ನಿರ್ದೇಶಕರಾಗಿದ್ದಾರೆ. ಪ್ರಸನ್ನ್ ಶಿವಮೊಗ್ಗ ಜಿಲ್ಲೆಯ ಸಾಗರ್ ಮೂಲದವರಾಗಿದ್ದು, ಅಕ್ಷತಾರನ್ನ ಪ್ರೀತಿಸಿ ಮದುವೆ ಆಗಿದ್ದಾರೆ. ಎಂಟು ವರ್ಷಗಳ ಹಿಂದೆ ಗುರು-ಹಿರಿಯರ ಸಮ್ಮುಖದಲ್ಲಿ ಅಕ್ಷತಾ- ಪ್ರಸನ್ನ್ ಮದುವೆ ನಡೆದಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *