Connect with us

LATEST NEWS

ಡಿವೈಡರ್ ದಾಟಿ ಕಂಟೈನರ್‌ಗೆ ಢಿಕ್ಕಿ ಹೊಡೆದ ಬೈಕ್- ಸ್ಥಳದಲ್ಲೇ‌ ಸವಾರ ಮೃತ್ಯು

ಮಂಗಳೂರು ಡಿಸೆಂಬರ್ 06: ಕಂಟೈನರ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಪಡೀಲ್‌ನಲ್ಲಿ ಮಧ್ಯಾಹ್ನ ಸಂಭವಿಸಿದೆ.


ಮೃತ ಬೈಕ್‌ ಸವಾರನನ್ನು ನೀರುಮಾರ್ಗದ ಮನ್ವಿತ್(22) ಎಂದು ಗುರುತಿಸಲಾಗಿದೆ. ನಂತೂರು ಕಡೆಯಿಂದ ಪಡೀಲ್‌ನತ್ತ ಕಂಟೈನರ್‌ ಸಂಚಾರ ಮಾಡುತ್ತಿದ್ದ ವೇಳೆ ಮುಂಭಾಗದಲ್ಲಿ ಬಂದ ಬೈಕ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ಕಂಟೈನರ್‌ ಅಡಿಗೆ ಬಿದ್ದದ್ದು ಬೈಕ್‌ ಸವಾರ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

comments