Connect with us

FILM

ಹಿರಿಯ ನಟಿ ಲಕ್ಷ್ಮಿ ಮಗಳಿಗೆ ಕಾಮುಕರ ಕಾಟ..ವಿಡಿಯೋ ಮೂಲಕ ಕಾಮುಕರ ಬೇವರಿಳಿಸಿ ನಟಿ ಐಶ್ವರ್ಯಾ ಭಾಸ್ಕರನ್

ಚೆನ್ನೈ ಎಪ್ರಿಲ್ 22: ಹಿರಿಯ ನಟಿ ಲಕ್ಷ್ಮೀ ಅವರ ಪುತ್ರಿ ಐಶ್ವರ್ಯಾ ಭಾಸ್ಕರನ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕಾಮುಕರ ಕಾಟ ಹೆಚ್ಚಾಗಿದ್ದು, ವಿಡಿಯೋ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹಿರಿಯ ನಟಿ ಲಕ್ಷ್ಮೀ ಅವರ ಪುತ್ರಿ ಐಶ್ವರ್ಯ ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನಟಿಸಿದ್ದಾರೆ. ಒಂದು ಕಾಲದಲ್ಲಿ ಸ್ಟಾರ್​ ನಟರ ಜತೆಯಲ್ಲೇ ತೆರೆಹಂಚಿಕೊಂಡಿದ್ದಾರೆ.


ಆದರೆ, ಇತ್ತೀಚಿನ ದಿನಗಳಿಂದ ಐಶ್ವರ್ಯಾ ಅವರು ಸಿನಿಮಾ ಮತ್ತು ಕಿರುತೆರೆಯಿಂದ ದೂರ ಉಳಿದಿದ್ದಾರೆ. ಸದ್ಯ ನನಗೆ ಯಾವುದೇ ಕೆಲಸ ಇಲ್ಲ. ಹಣವು ಇಲ್ಲ. ಹೀಗಾಗಿ ಹೊಟ್ಟೆ ಪಾಡಿಗಾಗಿ ಬೀದಿ ಬೀದಿಗಳಲ್ಲಿ ಸಾಬೂನು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದೇನೆ. ಸಿನಿಮಾದಿಂದ ಯಾವುದೇ ಅವಕಾಶಗಳು ಬರುತ್ತಿಲ್ಲ. ಯಾರಾದರೂ ಕರೆದು ಅವಕಾಶ ಕೊಡುತ್ತಾರೇನೋ ಎಂದು ಕಾಯುತ್ತಿದ್ದೇನೆ ಎಂದು ಈ ಹಿಂದೆ ಹೇಳಿಕೊಂಡಿದ್ದರು.


ಇದೀಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಐಶ್ವರ್ಯಾ ಭಾಸ್ಕರನ್​ ಅವರು ತಮ್ಮ “ಮಲ್ಟಿ ಮಮ್ಮಿ” ಹೆಸರಿನ ಯೂಟ್ಯೂಬ್​ ಚಾನೆಲ್​ ಮೂಲಕ ವಿವರಿಸಿದ್ದು, ಕಿರುಕುಳ ನೀಡಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹೊಟ್ಟೆಪಾಡಿಗಾಗಿ ಕಷ್ಟಪಟ್ಟು ಸಾಬೂನು ಮಾರಾಟ ಮಾಡಿ ಜೀವನ ಸಾಗಿಸಿದರು ಕೆಲ ದುಷ್ಟರು ನಮ್ಮನ್ನು ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ ಎಂದು ಐಶ್ವರ್ಯಾ ಬೇಸರ ಹೊರಹಾಕಿದ್ದಾರೆ. ಅನೇಕರು ಜಾಲತಾಣದಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಇದು ನನ್ನ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತಿದೆ. ನನ್ನ ಮಗಳ ಸಲಹೆ ಮೇರೆಗೆ ನಾನು ಈ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದೇನೆ. ಸಾಬೂನು ಮಾರಾಟ ಮಾಡಲು ನನ್ನ ಫೋನ್​ ನಂಬರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡ ಬಳಿಕ ಕಿರುಕುಳಗಳು ಆರಂಭವಾಯಿತು. ​


ಗ್ರಾಹಕರೊಂದಿಗೆ ಆರ್ಡರ್ ಪಡೆಯಲು ತನ್ನ ಫೋನ್ ನಂಬರ್​ ಅನ್ನು ಐಶ್ವರ್ಯಾ ಅವರು ಹಂಚಿಕೊಂಡಿದ್ದು, ಅಂದಿನಿಂದ ಅವರಿಗೆ ಅನುಚಿತ ಮೆಸೇಜ್​ಗಳು ಮತ್ತು ಅಶ್ಲೀಲ ಫೋಟೋಗಳು ನಿರಂತರವಾಗಿ ಬರುತ್ತಿವೆ. ಅದರಲ್ಲೂ ಕೆಲ ಪುಂಡರು ತಮ್ಮ ಖಾಸಗಿ ಭಾಗದ ಫೋಟೋಗಳನ್ನು ಸಹ ಶೇರ್​ ಮಾಡುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ವಿಚಲಿತಗೊಂಡಿರುವುದಾಗಿ ಐಶ್ವರ್ಯಾ ಹೇಳಿಕೊಂಡಿದ್ದಾರೆ. ವಿಡಿಯೋವನ್ನು ಸಾಕ್ಷಿಯಾಗಿ ಇಟ್ಟುಕೊಂಡು ಸೈಬರ್‌ ಕ್ರೈಮ್‌ಗೆ ಮೊರೆಹೋಗಲು ನಾನು ಬಯಸುವುದಿಲ್ಲ. ಆದರೆ, ಕಿರುಕುಳ ಇದೇ ರೀತಿ ಮುಂದುವರಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *