Connect with us

    FILM

    ಹೃದಯಾಘಾತದಿಂದ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ!

    ಬೆಂಗಳೂರು , ಆಗಸ್ಟ್ 07ಸ್ಯಾಂಡಲ್‌ವುಡ್‌ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

    ಬ್ಯಾಂಕಾಕ್ ನಲ್ಲಿ ಹಾರ್ಟ್ ಅಟ್ಯಾಕ್ ಆಗಿ  ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇವರಿಗೆ ಶೌರ್ಯ ಎಂಬ ಓರ್ವ ಪುತ್ರನಿದ್ದಾನೆ. 2016ರಲ್ಲಿ ಬಿಡುಗಡೆಯಾದ ಅಪೂರ್ವ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಸ್ಪಂದನಾ ನಟಿಸಿದ್ದರು.

    ಪೊಲೀಸ್ ಅಧಿಕಾರಿ ಶಿವರಾಂ ಅವರ ಪುತ್ರಿಯಾಗಿರುವ ಸ್ಪಂದನಾ ಅವರನ್ನು ವಿಜಯ ರಾಘವೇಂದ್ರ ಅವರನ್ನು 2007ರ ಆಗಸ್ಟ್ 26 ರಲ್ಲಿ ಇವರ ವಿವಾಹವಾಗಿದ್ದರು. ಇವರ ವಿವಾಹ 16 ನೇ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಬಾಕಿ ಇರುವಂತೆ ಈ ದುರಂತ ನಡೆದಿದೆ.

    ನಾಳೆ ಬೆಂಗಳೂರಿಗೆ ಸ್ಪಂದನಾ ವಿಜಯರಾಘವೇಂದ್ರ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗುತ್ತದೆ ಎಂದು ವಿಜಯರಾಘವೇಂದ್ರ ಅವರ ಕುಟುಂಬ ಮಾಹಿತಿ ನೀಡಿದೆ. ಮೂರು ದಿನಗಳ ಹಿಂದೆ ಸ್ಪಂದನಾ ಅವರು ಬ್ಯಾಂಕಾಕ್‌ ಗೆ ತೆರಳಿದ್ದರು. ನಿನ್ನೆ ಬ್ಯಾಂಕಾಕ್ ನಲ್ಲಿ ಹೃದಯಾಘಾತವಾಗಿ, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.  ಲೋ ಬಿಪಿ ಹಾಗು ಹೃದಯಾಘಾತ ಆಗಿತ್ತು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ವಿಜಯರಾಘವೇಂದ್ರ ಕುಟುಂಬದವರು ಬ್ಯಾಂಕಾಕ್ ಗೆ ತೆರಳಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply