LATEST NEWS
ನಟ ಪ್ರಕಾಶ್ ರೈ ಗೆ ಬೆದರಿಕೆ : ಮಂಗಳೂರು ವಿಮಾನ ನಿಲ್ದಾಣದಲ್ಲಿ ಜೀವ ಬೆದರಿಕೆ ಹಾಕಿದ ದುಷ್ಕರ್ಮಿಗಳು

ನಟ ಪ್ರಕಾಶ್ ರೈ ಗೆ ಬೆದರಿಕೆ : ಮಂಗಳೂರು ವಿಮಾನ ನಿಲ್ದಾಣದಲ್ಲಿ ಜೀವ ಬೆದರಿಕೆ ಹಾಕಿದ ದುಷ್ಕರ್ಮಿಗಳು
ಮಂಗಳೂರು, ಮಾರ್ಚ್ 14 : ಖ್ಯಾತ ಬಹಭಾಷಾ ನಟ ಪ್ರಕಾಶ್ ರೈ ಗೆ ಬೆದರಿಕೆ ಹಾಕಿದ್ದಾರೆ.ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿನ್ನೆ ರಾತ್ರಿ ಅಗಮಿಸಿದ್ದ ಸಂದರ್ಭ ಪ್ರಕಾಶ್ ರೈ ಅವರಿಗೆ ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ಸ್ವತ ಪ್ರಕಾಶ್ ರೈ ಅವರೇ ಹೇಳಿಕೆ ನೀಡಿದ್ದಾರೆ.

ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಇಂದು ಆಯೋಜಿಸಿದ್ದ ಮಾದ್ಯಮ ಸಂವಾದ ಕಾರ್ಯಕ್ರಮದಲ್ಲಿ ತನಗೆ ಬೆದರಿಕೆ ಹಾಕಿದ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಬಂದಿಳಿದ ಸಂದರ್ಭ ಕಾರ್ ಡ್ರೈವರ್ ಬಳಿ ನಾಲ್ಕು ಮಂದಿ ಅಪರಿಚಿತರು ಬಂದು ಪ್ರಶ್ನೆ ಮಾಡಿದ್ದಾರೆ.
ನಾನು ಎಲ್ಲಿ ಉಳಿದುಕೊಳ್ಳುತ್ತೇನೆ ಎಂದು ಕೇಳಿ, ಕಾರ್ ಡ್ರೈವರ್ ಗೆ ಬೆದರಿಸಿ ಧಮ್ಕಿ ಹಾಕಿದ್ದಾರೆ ಎಂದು ಪ್ರಕಾಶ್ ರೈ ದೂರಿದರು.
ಕೂಡಲೇ ಪೊಲೀಸರು ಬಂದ ಕಾರಣ ಅಪರಿಚಿತ ವ್ಯಕ್ತಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ತಿಳಿಸಿದ ಅವರು ನನಗೆ ಇಲ್ಲಿ ಆತಂಕದ ವಾತವರಣ ಇದೆ ಎಂದು ಹೇಳಿದರು.