LATEST NEWS
ಪಬ್ ದಾಳಿ ಸಾಕ್ಷ್ಯಾಧಾರಗಳಿದ್ದೂ ಆರೋಪಿಗಳು ಖುಲಾಸೆ, ಕೋರ್ಟ್ ತೀರ್ಪು ಪ್ರಶ್ನಾರ್ಹ : ಪ್ರಕಾಶ್ ರೈ
ಪಬ್ ದಾಳಿ ಸಾಕ್ಷ್ಯಾಧಾರಗಳಿದ್ದೂ ಆರೋಪಿಗಳು ಖುಲಾಸೆ, ಕೋರ್ಟ್ ತೀರ್ಪು ಪ್ರಶ್ನಾರ್ಹ : ಪ್ರಕಾಶ್ ರೈ
ಮಂಗಳೂರು, ಮಾರ್ಚ್ 14 :ಮಂಗಳೂರು ಪಬ್ ದಾಳಿ ವಿಚಾರಲ್ಲಿ ಮಾನ್ಯ ನ್ಯಾಯಾಲಯ ಆರೋಪಿಗಳನ್ನು ಖುಲಾಸೆ ಮಾಡಿ ನೀಡಿರುವ ತೀರ್ಪು ವಿಚಾರ ಜನಸಾಮಾನ್ಯರಲ್ಲಿ ಗೊಂದಲ ಉಂಟುಮಾಡಿದೆ.
ಮಂಗಳೂರಿನಲ್ಲಿ ಮಾದ್ಯಮ ಸಂವಾದದಲ್ಲಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಬ್ ದಾಳಿ ವಿಚಾರದಲ್ಲಿ ಕೋರ್ಟ್ ಸಾಕ್ಷಧಾರ ಇಲ್ಲ ಅಂತ ಹೇಳಿದೆ. ಆದರೆ ಕಾರ್ಯಕರ್ತರು ಹೊಡೆದಿರುವ ವಿಡಿಯೋ ಕೂಡಾ ಇದೆ.
ಇಷ್ಟೆಲ್ಲಾ ಸಾಕ್ಷಾಧಾರಗಳು ಇದ್ದರೂ ಮಾನ್ಯ ನ್ಯಾಯಾಲಯ ಆರೋಪಿಗಳನ್ನು ಖುಲಾಸೆ ಮಾಡಿ ತೀರ್ಪು ನೀಡಿ ಜನ ಸಾಮಾನ್ಯರನ್ನು ಗೊಂದಲಕ್ಕೀಡು ಮಾಡಿದೆ.
ಕೋರ್ಟ್ ಆರ್ಡರ್ ಕೊಟ್ಟಿದ್ದು ನ್ಯಾಯನಾ? ಎಂದು ಪ್ರಶ್ನಿಸಿದ ಅವರು ಆಡಳಿತರೂಢ ಕಾಂಗ್ರೆಸ್ ಗೆ ಇದರ ಬಗ್ಗೆ ಪ್ರಶ್ನೆ ಮಾಡಬಹುದಿತ್ತು.
ಆದರೆ ಪ್ರಶ್ನೆ ಮಾಡಿದ್ರೆ ವಿರೋಧಿಯಾಗ್ತಿವಿ ಎಂಬ ಭಯ ಅವರನ್ನು ಕಾಡುತ್ತಿದ್ದು, ಈ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಪ್ರದರ್ಶನ ಮಾಡುತ್ತಿದೆ ಎಂದು ಆರೋಪಿಸಿದರು.
You must be logged in to post a comment Login