ಬಾಲಿವುಡ್ ನಟಿ ಅಮಲಾ ಪೌಲ್ ಹಾಗೂ ಪೃಥ್ವಿರಾಜ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ‘ಆಡು ಜೀವಿತಂ’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಈ ಟ್ರೈಲರ್ ನಲ್ಲಿ ಅಮಲಾ ಪೌಲ್ ಮತ್ತು ನಾಯಕ ಪೃಥ್ವಿರಾಜ್ ಲಿಪ್ ಲಾಕ್ ಮಾಡಿಕೊಂಡಿದ್ದಾರೆ. ಈ ದೃಶ್ಯ ಸಖತ್ ವೈರಲ್ ಕೂಡ ಆಗಿದೆ. ಇಂಥದ್ದೇ ಕಾರಣಗಳಿಂದಾಗಿ ಸದಾ ಸುದ್ದಿಯಾಗುವ ಅಮಲಾರನ್ನು ನೆಟ್ಟಿಗರು ಸಾಕಷ್ಟು ಪ್ರಶ್ನೆಗಳನ್ನೇ ಕೇಳಿದ್ದಾರೆ.

ಲಿಪ್ ಲಾಕ್ ದೃಶ್ಯವನ್ನು ನೋಡಿದ ಪಡ್ಡೆಗಳು ಮೈ ಬೆಚ್ಚಗೆ ಮಾಡಿಕೊಂಡರೆ, ನೆಟ್ಟಿಗರು ಇಂತಹ ದೃಶ್ಯಗಳಲ್ಲಿ ನಟಿಸುವುದಕ್ಕೆ ಏನೂ ಅನಿಸುವುದಿಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ. ಇಂತಹ ಸೀನ್ ಗಳಲ್ಲಿ ಅಷ್ಟೊಂದು ಸಖತ್ತಾಗಿ ನಟಿಸ್ತಿರಲ್ಲ ಹೇಗೆ? ಎಂದು ಇನ್ನೂ ಕೆಲವರು ಕಾಲೆಳೆದಿದ್ದಾರೆ. ಇಷ್ಟೆಲ್ಲ ಪ್ರಶ್ನೆಗಳನ್ನು ಓದಿಕೊಂಡು ಅಮಲಾ ಸುಮ್ಮನೆ ಕೂತಿಲ್ಲ. ತಮ್ಮದೇ ಆದ ರೀತಿಯಲ್ಲೇ ಉತ್ತರಿಸಿದ್ದಾರೆ.

ಲಿಪ್ ಲಾಕ್ ದೃಶ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಅಮಲಾ ಪೌಲ್, ಈ ಹಿಂದಿನ ಸಿನಿಮಾದಲ್ಲಿ ಬೆತ್ತಲೆಯಾಗಿಯೇ ನಟಿಸಿದ್ದೇನೆ. ಲಿಕ್ ಲಾಕ್ ನನಗೆ ಲೆಕ್ಕಕ್ಕೇ ಇಲ್ಲ ಎಂದು ಬೋಲ್ಡ್ ಉತ್ತರವನ್ನೇ ಕೊಟ್ಟಿದ್ದಾರೆ. ಈ ಮೂಲಕ ಇಂತಹ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ತಮಗೆ ಯಾವುದೇ ಮುಜುಗರವಿಲ್ಲವೆಂದು ಹೇಳಿಕೊಂಡಿದ್ದಾರೆ.

ಪೃಥ್ವಿರಾಜ್ ಮತ್ತು ಅಮಲಾ ಪೌಲ್ ಕಾಂಬಿನೇಷನ್ ನ ಈ ಮಲಯಾಳಂ ಸಿನಿಮಾ ಆಡು ಜೀವಿದಂ ಕೃತಿಯನ್ನು ಆಧರಿಸಿದೆ. ಪೃಥ್ವಿರಾಜ್ ಈ ಸಿನಿಮಾದಲ್ಲಿ ನಜೀಬ್ ಮೊಹಮ್ಮೊದ್ ಪಾತ್ರದಲ್ಲಿ ನಟಿಸಿದ್ದರೆ, ಅವರ ಪತ್ನಿಯಾಗಿ ಅಮಲಾ ಕಾಣಿಸಿಕೊಂಡಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿವೆ.

Share Information