Connect with us

KARNATAKA

ಸಾವರ್ಕರ್​ ಫೋಟೋ ಹಾಕಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಆರೋಪಿ ಬಂಧನ

ಶಿವಮೊಗ್ಗ, ಆಗಸ್ಟ್ 14: ಸಿಟಿ ಸೆಂಟರ್ ಮಾಲ್​ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಸಾವರ್ಕರ್​ ಫೋಟೋ ಹಾಕಿದ್ದನ್ನು ವಿರೋಧ ವ್ಯಕ್ತಪಡಿಸಿದ್ದ ಆಸೀಫ್​ನನ್ನು ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸದ್ಯ ನ್ಯಾಯಾಲಯ ಆ. 26ರವರೆಗೆ ಆಸೀಫ್​ನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಆದೇಶ ಹೊರಡಿಸಿದೆ. ಆರೀಫ್ ವಾರ್ಡ್​ ನಂ 25 ಪಾಲಿಕೆ ಸದಸ್ಯೆ ಪತಿಯಾಗಿದ್ದು, ಜೊತೆಗೆ ಕನ್ನಡ ಜನಪರ ವೇದಿಕೆ ಸಂಘಟನೆಯ ಪ್ರಮುಖ ಕೂಡಾ ಆಗಿದ್ದಾನೆ.

ಈ ಸಂಬಂಧ ಶಿವಮೊಗ್ಗ ಎಸ್ ಪಿ ಲಕ್ಷ್ಮಿಪ್ರಸಾದ್ ಮಾತನಾಡಿ, ಸಾವರ್ಕರ್ ಭಾವಚಿತ್ರಕ್ಕೆ ಅಗೌರವ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಷರೀಫ್ ಅಲಿಯಾಸ್ ಅಸಿಫ್‌ ಎಂಬಾತನನ್ನು ಬಂಧಿಸಲಾಗಿದೆ. ಷರೀಫ್​ಗೆ ಆಗಸ್ಟ್ 26ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ನಿನ್ನೆ ಷರೀಫ್ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಬಂಧಿಸಿದ್ದೇವೆ. ಆಗಸ್ಟ್ 16ಕ್ಕೆ ಷರೀಫ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ ಎಂದು ಹೇಳಿದ್ದಾರೆ.

ಜಿಲ್ಲೆಯ ಸಿಟಿ ಸೆಂಟರ್ ಮಾಲ್​​ನಲ್ಲಿ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಹಾಕಿ ಅಲಂಕರಿಸಲಾಗಿತ್ತು. ಭಾವಚಿತ್ರಗಳ ಮಧ್ಯದಲ್ಲಿ ವಿನಾಯಕ ದಾಮೋದರ ಸಾವರ್ಕರ್ ಭಾವಚಿತ್ರ ಗಮನಿಸಿ ಎಂ.ಡಿ.ಷರೀಫ್ ಅಲಿಯಾಸ್ ಆಸೀಫ್ ಆಕ್ರೋಶ ವ್ಯಕ್ತಪಡಿಸಿದ್ದನು.

Advertisement
Click to comment

You must be logged in to post a comment Login

Leave a Reply