Connect with us

BANTWAL

ಸ್ಕೂಟರ್ ಗೆ ಲಾರಿ ಡಿಕ್ಕಿ – 11 ವರ್ಷದ ಬಾಲಕ ಸಾವು

ಬಂಟ್ವಾಳ : ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 11 ವರ್ಷದ ಬಾಲಕ ಸಾವನಪ್ಪಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಗಡಿಯಾರ ಸಮೀಪದ ಕೆರೆ ಬಳಿ ಸೋಮವಾರ ಸಂಜೆ ಸಂಭವಿಸಿದೆ.


ಮೃತರನ್ನು ಗಡಿಯಾರ ನಿವಾಸಿ ದಿನೇಶ್ ಶೆಟ್ಟಿ ಅವರ ಪುತ್ರ, 6ನೇ ತರಗತಿ ವಿದ್ಯಾರ್ಥಿ ಅದ್ವಿತ್(11) ಎಂದು ಗುರುತಿಸಲಾಗಿದ್ದು, ಅಪಘಾತದಲ್ಲಿ ಬಾಲಕನ ತಂದೆಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಡೋಳಿಯ ವಿಸ್ಡಮ್ ಶಾಲೆಯ ಆರನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿ ಸಂಜೆ ಶಾಲೆ ಬಿಟ್ಟು ತನ್ನ ತಂದೆ ಜತೆ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಬೆಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಢಿಕ್ಕಿ ಹೊಡೆದು ಪರಾರಿಯಾಗಿದೆ.
ಪರಾರಿಯಾಗಿದ್ದ ಲಾರಿಯನ್ನು ನೆಲ್ಯಾಡಿಯಲ್ಲಿ ಸ್ಥಳೀಯರು ಪತ್ತೆ ಹಚ್ಚಿದ್ದಾರೆ. ಘಟನೆಯಲ್ಲಿ ಸ್ಕೂಟರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

Advertisement
Click to comment

You must be logged in to post a comment Login

Leave a Reply