LATEST NEWS
ಪಿಂಚಣಿಗಾಗಿ ಬರಿಗಾಲಲ್ಲಿ ಬಿಸಿಲಿನಲ್ಲಿ ನಡೆದ 70 ವರ್ಷದ ಮಹಿಳೆ

ಜರಿಗಾಂವ್: 70 ವರ್ಷದ ಮಹಿಳೆಯೊಬ್ಬರು ಬ್ಯಾಂಕ್ ನಿಂದ ಪಿಂಚಣಿ ಹಣ ಪಡೆಯಲು ಕಿಲೋ ಮೀಟರ್ ಗಟ್ಟಲೆ ಬಿಸಿಲಿನಲ್ಲಿ ಹಳೆಯ ಚೇರ್ ಒಂದರ ಸಹಾಯದಲ್ಲಿ ನಡೆದು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿದ್ದು ಏಪ್ರಿಲ್ 17 ರಂದು ಒಡಿಶಾದ ನಬ್ರಂಗ್‌ಪುರ ಜಿಲ್ಲೆಯ ಜರಿಗಾಂವ್ ಬ್ಲಾಕ್‌ನಲ್ಲಿ
ಸೂರ್ಯ ಹರಿಜನ ಎಂಬ ವೃದ್ಧೆಯದು ಬಡತನದ ಕುಟುಂಬ, ವೃದ್ಧೆಯು ಪಿಂಚಣಿ ಪಡೆಯಲು ಬ್ಯಾಂಕ್‌ಗೆ ಹೋಗಿದ್ದಾರೆ. ಆದರೆ ಆಕೆಯ ಬೆರಳು ಮುರಿದ ಕಾರಣ ಬಯೋಮೆಟ್ರಿಕ್ ಮಾಡಲಾಗಲಿಲ್ಲ, ಈ ಹಿನ್ನಲೆ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಇನ್ನು ಈ ವಿಡಿಯೋ ವೈರಲ್ ಆದ ಬಳಿಕ ಘಟನೆಯ ಕುರಿತು ಪ್ರತಿಕ್ರಿಯಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮ್ಯಾನೇಜರ್, ‘ತನ್ನ ‘ಮುರಿದ ಬೆರಳುಗಳಿಂದ’ ಹಣವನ್ನು ಹಿಂಪಡೆಯಲು ತೊಂದರೆಯನ್ನು ಎದುರಿಸುತ್ತಿದ್ದಾರೆ ಮತ್ತು ಸಮಸ್ಯೆಯನ್ನು ಪರಿಹರಿಸಲು ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ’ ಎಂದು ಹೇಳಿದ್ದಾರೆ.

‘ವೃದ್ಧೆಯ ಬೆರಳುಗಳು ಮುರಿದುಹೋಗಿವೆ. ಆದ್ದರಿಂದ ಆಕೆಯು ಪಿಂಚಣಿಯನ್ನು ಪಡೆಯಲು ತೊಂದರೆ ಎದುರಿಸುತ್ತಿದ್ದಾಳೆ. ಆಕೆಗೆ ಬ್ಯಾಂಕ್‌ನಿಂದ ಕೈಯಾರೆ 3,000 ರೂ.ಗಳನ್ನು ನೀಡಿದ್ದೇವೆ. ನಾವು ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುತ್ತೇವೆ’ ಎಂದು ಜರಿಗಾಂವ್ ಶಾಖೆಯ ಎಸ್‌ಬಿಐ ವ್ಯವಸ್ಥಾಪಕರು ಹೇಳಿದರು.