Connect with us

    KARNATAKA

    ಕೋಲಾರದಲ್ಲಿ ಅಪರೂಪದ ‌ ಬಿಳಿ ನಾಗರಹಾವು ಪತ್ತೆ..!

    ಕೋಲಾರ : ಅನೇಕ ದಂತ ಕತೆಗಳು, ಈ  ಬಿಳಿ ನಾಗರಹಾವು ಕಾಣ ಸಿಕ್ಕರೆ ಅದೃಷ್ಟ ಖುಲಾಯಿಸುತ್ತೆ ಹೀಗೇ ಅನೇಕ ವಿಭಿನ್ನ ಕಥೆಗಳಿರುವ ಅಪರೂಪದಲ್ಲಿ ಅಪರೂಪದ ‌ ಶ್ವೇತ ಬಣದ ನಾಗರಹಾವೊಂದು ಕೋಲಾರದಲ್ಲಿ ಪತ್ತೆಯಾಗಿದೆ.

    ಕೋಲಾರದ ಮುನೇಶ್ವರ ನಗರದ ರವೀಂದ್ರ ಮನೆಯಲ್ಲಿ 6 ಅಡಿ ಉದ್ಧದ ಬಿಳಿ ಬಣ್ಣದ ನಾಗರಹಾವು ಕಾಣಿಸಿಕೊಂಡಿತ್ತು. ಅಪರೂಪದ‌ ಬಿಳಿನಾಗರ ಹಾವನ್ನು ನೋಡಲು ಮನೆಗೆ ಜನ ಮುಗಿಬಿದ್ದಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಉರುಗರಕ್ಷಕ ರವಿ ನಾಗರವನ್ನು ಸುರಕ್ಷಿತವಾಗಿ ರಕ್ಷಿಸಿ, ಕೋಲಾರದ ಅಂತರಗಂಗೆ ಅರಣ್ಯಪ್ರದೇಶದಲ್ಲಿ ಬಿಟ್ಟಿದ್ದಾರೆ.
    ಅಲ್ಬಿನೋ ಕೋಬ್ರಾ ಎಂದೆ ಕರೆಯಲ್ಪಡುವ ಈ ಬಿಳಿ ಬಣ್ಣದ ನಾಗರಹಾವು ಚರ್ಮ ಹಾಗೂ ರಕ್ತದ ಸಮಸ್ಯೆಯಿಂದ ಈ ರೀತಿ ಆಗುತ್ತೆ. ಡಾಳವಾಗಿ ಕಾಣುವ ಈ ಬಣ್ಣದಿಂದ ಸುಲಭವಾಗಿ ಬೇಟೆ ಪ್ರಾಣಿಗಳಿಗೆ ಆಹಾರವಾಗುತ್ತೆ.

    Share Information
    Advertisement
    Click to comment

    You must be logged in to post a comment Login

    Leave a Reply