BANTWAL
ಕಣಜದ ಹುಳು ದಾಳಿಯಿಂದ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಕೊನೆಯುಸಿರು

ಬಂಟ್ವಾಳ, ಆಗಸ್ಟ್ 09: ಕಣಜದ ಹುಳುಗಳು ದಾಳಿ ನಡೆಸಿ ಹಿನ್ನೆಲೆ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಇಂದು ಸಾವನ್ನಪ್ಪಿದ್ದಾರೆ. ಮೃತರನ್ನು ಮಾಣಿಲ ಗ್ರಾಮದ ಪಕಳಕುಂಜ ನಿವಾಸಿ ಶ್ರೀಕೃಷ್ಣ ನಾಯಕ್(50) ಎಂದು ಗುರುತಿಸಲಾಗಿದೆ.
ಕೃಷ್ಣರವರ ಮೇಲೆ ನಿನ್ನೆ ಸಂಜೆ ವೇಳೆ ಪೆರುವಾಯಿ ಸಮೀಪ ಕಣಜದ ಹುಳುಗಳು ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಿದ್ದ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೇ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
