ವಿಟ್ಲ ಮಾರ್ಚ್ 15: ಉಮ್ರಾ ಯಾತ್ರೆಗೆ ತೆರಳಿದ್ದ ವಿಟ್ಲ ಮೂಲದ ವ್ಯಕ್ತಿಯೋರ್ವರು ಸೌದಿ ಅರೇಬಿಯಾದಲ್ಲಿ ಮೃತಪಟ್ಟ ಘಟನೆ ನಡೆದಿದೆ.

ವಿಟ್ಲ ಕೊಳಂಬೆ ನಿವಾಸಿ ಹಸನಬ್ಬ ಮೃತಪಟ್ಟವರು.ಅವರು ಕಳೆದ ವಾರ ಕುಟುಂಬಸ್ಥರ ಜೊತೆ ಉಮ್ರಾ ಯಾತ್ರೆ ನಿರ್ವಹಿಸಲು ಸೌದಿ ಅರೇಬಿಯಾಗೆ ತೆರಳಿದ್ದರು. ಆದರೆ ಮಂಗಳವಾರಸೌದಿ ಅರೇಬಿಯಾದ ಬುರೈದದಲ್ಲಿ ಮೃತಪಟ್ಟಿದ್ದಾರೆ. ಮಗನ ರೂಂನಲ್ಲಿ ಮಲಗಿದ್ದ ಸಂದರ್ಭ ಹಸನಬ್ಬ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.