Connect with us

  LATEST NEWS

  ಕಾರ್ಕಳ – ವಿಷ ಸೇವಿಸಿ ಯುವಕ ಆತ್ಮಹತ್ಯೆ…!!

  ಕಾರ್ಕಳ ಮಾರ್ಚ್ 15: ವಿಷ ಸೇವಿಸಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ,


  ಮೃತ ಯುವಕನನ್ನು ಹಿರಿಯಂಗಡಿಯ ಪ್ರಜ್ವಲ್‌ ದೇವಾಡಿಗ(18) ಎಂದು ಗುರುತಿಸಲಾಗಿದೆ. ಪ್ರಜ್ವಲ್ ಮಾರ್ಚ್ 12ರಂದು ಮನೆಯಲ್ಲಿ ಒಬ್ಬನೇ ಇದ್ದ ಸಂದರ್ಭ ವಿಷ ಸೇವಿಸಿದ್ದ ಎಂದು ಹೇಳಲಾಗಿದೆ. ಪ್ರಜ್ವಲ್ ಗೆಳೆಯ ಈ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಪ್ರಜ್ವಲ್‌ನನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಪ್ರಜ್ವಲ್‌ ಮಂಗಳವಾರ ಸಾವನಪ್ಪಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply