Connect with us

KARNATAKA

ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡ; ಗುಪ್ತಾಂಗಕ್ಕೆ ಹೊಡೆದು ಕೊಲೆಗೈದ ಪತ್ನಿ!

ಚಾಮರಾಜ ನಗರ, ಜನವರಿ 23: ಸರಗೂರು ತಾಲೂಕಿನ ಮುಳ್ಳೂರಿನಲ್ಲಿ ಮಹಿಳೆಯೊಬ್ಬಳು ಬೇರೆ ಯುವಕನೊಂದಿಗೆ ಹೊಂದಿದ್ದ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಕ್ಕೆ ಆಕೆ ಈ ಕೃತ್ಯ ಎಸಗಿದ್ದಾಳೆ ಎಂದು ಆರೋಪಿಸಲಾಗಿದೆ.

ಬಸವರಾಜು (41) ಕೊಲೆಯಾದ ವ್ಯಕ್ತಿ. ಬಸವರಾಜು ಅವರ ಪತ್ನಿ ನೇತ್ರಾವತಿ ಕೊಲೆ ಮಾಡಿರುವ ಆರೋಪಿಯಾಗಿದ್ದು, ಪೊಲೀಸರು ಈಕೆಯನ್ನು ಬಂಧಿಸಿ ಶನಿವಾರ ನ್ಯಾಯಾಲಯ ಮುಂದೆ ಹಾಜರಿಪಡಿಸಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮುಳ್ಳೂರಿನ ಬಸವರಾಜು ಹಾಗೂ ಚಾಮರಾಜ ನಗರ ಜಿಲ್ಲೆಯ ಮಾದನಹಳ್ಳಿಯ ನೇತ್ರಾವತಿ ವಿವಾಹ ಐದಾರು ವರ್ಷಗಳ ಹಿಂದೆ ನಡೆದಿತ್ತು. ಇವರಿಗೆ ಐದು ವರ್ಷದ ಮಗುವಿದೆ. ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ಬಸವರಾಜು ರಾತ್ರಿ ವೇಳೆ ಮನೆಗೆ ತಡವಾಗಿ ಬರುತ್ತಿದ್ದರು ಎನ್ನಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ನೇತ್ರಾವತಿ ಪತಿಗೆ ಗೊತ್ತಿಲ್ಲದಂತೆ ಬೇರೆ ಯುವಕನೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಳು.

ಈ ಬಗ್ಗೆ ಅನುಮಾನಗೊಂಡ ಪತಿ ಬಸವರಾಜು ಮನೆಯಲ್ಲಿ ಜಗಳವಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಪತ್ನಿ ಶುಕ್ರವಾರ ರಾತ್ರಿ ತಡವಾಗಿ ಬಂದ ಪತಿಯೊಂದಿಗೆ ಜಗಳವಾಡಿ ಗುಪ್ತಾಂಗಕ್ಕೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಬಸವರಾಜು ಅಣ್ಣ ಗುರುಸ್ವಾಮಿ ಸರಗೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *