Connect with us

    DAKSHINA KANNADA

    ಮಂಗಳೂರು ಪಾಂಡೇಶ್ವರ ರೈಲ್ವೇ ಗೇಟ್ ಬಳಿ ಕಾಣಿಸಿದ ಬೃಹತ್ ಹೆಬ್ಬಾವು..!

    ಮಂಗಳೂರು, ಜನವರಿ 06 : ಮಂಗಳೂರು ನಗರದ ಪಾಂಡೇಶ್ವರ ರೈಲಿನ ಗೇಟ್ ಬಳಿ ಬೃಹತ್ ಹೆಬ್ಬಾವು ಕಾಣಿಸಿಕೊಂಡಿದ್ದು ಕೆಲ ಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು.

    ರಸ್ತೆ ದಾಟುತ್ತಿರುವ ಹೆಬ್ಬಾವನ್ನು ಕಂಡ ಸ್ಥಳೀಯರು ಗಮನಿಸಿ, ರಸ್ತೆಯನ್ನು ಒಂದು ಕ್ಷಣ ರಸ್ತೆ ಬಂದ್ ಮಾಡಿ ಹೆಬ್ಬಾವು ರಸ್ತೆ ದಾಟಲು ಸಹಕರಿಸಿದರು. ಬೃಹತ್ ಗಾತ್ರದ ಹೆಬ್ಬಾವು ರೈಲ್ವೇ ಗೇಟ್ ಮುಂಭಾಗದಲ್ಲೇ ಅರಾಮವಾಗಿ ರಸ್ತೆ ದಾಟಿತ್ತು. ವಾಹನಗಳ ಭರಾಟೆಯ ಮಧ್ಯೆ ಹೆಬ್ಬಾವು ನಿಶ್ಚಿಂತೆಯಿಂದ ರಸ್ತೆ ದಾಟಿತ್ತು.

    ಇದನ್ನು ಗಮನಿಸಿದ ಕೆಲವರು ರಸ್ತೆ ತೆರವು ಮಾಡಿಕೊಟ್ಟು ಹಾವು ವಾಹನದ ಅಡಿಗೆ ಬೀಳದಂತೆ ನೋಡಿಕೊಂಡರು. ರಾತ್ರಿಯಾಗಿದ್ದರಿಂದ ರೈಲು ಬರದೆ ದಿಢೀರ್ ರಸ್ತೆ ಬಂದ್ ಮಾಡಿದ್ದು ವಾಹನ ಸವಾರರಿಗೆ ಕಿರಿಕಿರಿ ಮಾಡಿತ್ತು.‌ ಸಂಜೆಯ ಧಾವಂತದಲ್ಲಿ ಕೆಲವರು ಹಾರ್ನ್ ಮೊಳಗಿಸಿದರು. ಕೆಲವರು ಏನೆಂದು ಮುಂದೆ ಬಂದು ಅಚ್ಚರಿಯಿಂದ ನೋಡುತ್ತಾ ನಿಂತರು. ನಿಂತವರು ಮಾತ್ರ ಅಚ್ಚರಿಗೊಂಡು ಅಲ್ಲಿಂದ ಕದಲಲಿಲ್ಲ !

    Video:

    Share Information
    Advertisement
    Click to comment

    You must be logged in to post a comment Login

    Leave a Reply