Connect with us

DAKSHINA KANNADA

ಮಂಗಳೂರು ಏರ್ ಪೋರ್ಟ್ ನಲ್ಲಿ1.2 ಕೆಜಿ ಚಿನ್ನ ವಶ

ಮಂಗಳೂರು, ಜನವರಿ 6 : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 67 ಲಕ್ಷ ರೂ. ಮೌಲ್ಯದ 1.2 ಕಿ.ಗ್ರಾಂ ಅಕ್ರಮ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ವಶಪಡಿಸಕೊಂಡಿದ್ದಾರೆ.

ಜನ ಯಾವ ರೀತಿಯೆಲ್ಲಾ  ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಸ್ಪೈಸ್ ಜೆಟ್ ನಲ್ಲಿ ಪ್ರಯಾಣಿಸಿದ್ದ ಇಬ್ಬರ ಬಳಿಯಲ್ಲಿ ಅಕ್ರಮ ಚಿನ್ನ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಟ್ಕಳದ ಮೂಲದ ಪ್ರಯಾಣಿಕನೊಬ್ಬನು ದೊಡ್ಡ ಗಾತ್ರದ ಪ್ಲಾಸ್ಟಿಕ್ ಕ್ಯಾಪ್ಸೂಲ್‌ನೊಳಗೆ ಚಿನ್ನದ ಪೇಸ್ಟ್ ತುಂಬಿಸಿ ಗುದದ್ವಾರದಲ್ಲಿಟ್ಟು ಸಾಗಾಟ ಮಾಡಿದ್ದ. ಈತನಿಂದ 641 ಗ್ರಾಂ ಹಾಗೂ ಮತ್ತೋರ್ವ ಕೇರಳದ ಕಾಸರಗೋಡಿನ ನಿವಾಸಿಯಾಗಿದ್ದು, ಈತ 646 ಗ್ರಾಂ ಚಿನ್ನದ ಪೇಸ್ಟ್ ನ್ನು ಒಳಚಡ್ಡಿಯಲ್ಲಿಟ್ಟು ಸಾಗಾಟ ಮಾಡಿದ್ದ. ಒಟ್ಟು 1.2 ಕಿ.ಗ್ರಾಂ. ಚಿನ್ನ ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.