Connect with us

    LATEST NEWS

    ಮೂರು ಹಾವುಗಳನ್ನು ಒಮ್ಮೆಲೆ ನುಂಗಿ ಅರಗಿಸಿಕೊಳ್ಳಲಾಗದೆ ಒದ್ದಾಡಿದ ದೈತ್ಯ ಕಾಳಿಂಗ ಸರ್ಪ..!

    ಹಾವುಗಳಲ್ಲೇ ಭಯಾನಕವಾಗಿರುವ ಕಿಂಗ್ ಕೋಬ್ರಾದ ಬಗ್ಗೆ  ನಮಗೆಲ್ಲರಿಗೂ ಗೊತ್ತು. ಹಾವುಗಳಲ್ಲೇ ಅತ್ಯಂತ ಪವರ್ ಫುಲ್, ಉದ್ದವಾದ ಮತ್ತು ಅತ್ಯಂತ ವಿಷಕಾರಿ ಹಾವು ಎಂದೇ ಇದನ್ನು ಪರಿಗಣಿಸಲಾಗಿದೆ. ಹೆಬ್ಬಾವುಗಳನ್ನು ಸೇರಿ  ಇತರ ಹಾವು, ಪ್ರಾಣಿ ಮನುಷ್ಯರ ಮೇಲೂ ಈ  ಕಾಳಿಂಗ(King Cobra)  ಸರ್ಪಗಳು ದಾಳಿ ಮಾಡುತ್ತವೆ.

    ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನಾಗರಹಾವಿನ ಭಯಾನಕ ರೂಪವನ್ನು ನೋಡಿ ಎಲ್ಲರಿಗೂ ನಡುಕ ಹುಟ್ಟಿದಂತಿದೆ. ವೀಡಿಯೋದಲ್ಲಿ ದೊಡ್ಡದಾರ ಕಾಳಿಂಗ ಸರ್ಪ ನೆಲದ ಮೇಲೆ ಮಲಗಿರುವುದನ್ನು ನೋಡಬಹುದು.. ಆ ಮಲಗಿರುವ ಹಾವು ನಿಧಾನವಾಗಿ ತನ್ನ ಬಾಯಿಂದ ಒಂದಲ್ಲ, ಎರಡಲ್ಲ.. ಒಟ್ಟಿಗೆ ಮೂರು ಹಾವುಗಳನ್ನು ಉಗುಳುತ್ತದೆ. ಅಲ್ಲಿ ನೆರೆದಿದ್ದ ಜನ ಹಾವನ್ನು ಸುತ್ತುವರೆದು ಇಡೀ ದೃಶ್ಯವನ್ನು ಮೂಕವಿಸ್ಮಿತರಾಗಿ ನೋಡುತ್ತಿದ್ದಾರೆ. ಬಹುಷ ಈ ಮೂರು ಹಾವುಗಳನ್ನು ಒಂದರ ಮೇಲೊಂದರಂತೆ ಈ ದೈತ್ಯ ಕಾಳಿಂಗ ನುಂಗಿದೆ. ಬಳಿಕ ಅರಗಿಸಿಕೊಳ್ಳಲಾಗದೆ ಅದು ವಾಪಾಸ್ ಉಗುಳಿದೆ.  ದೈತ್ಯ ಕಿಂಗ್ ಕೋಬ್ರಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply